ಗಾಂಧೀಜಿ ನಡೆಸಿದ ಸರಳ ಜೀವನ
ಗಾಂಧಿಯವರು ತಮ್ಮ ಜೀವನದಲ್ಲಿ ಸಂಪೂರ್ಣ ಶಾಖಾಹಾರಿ ಪದ್ಧತಿಯನ್ನು ಅಳವಡಿಸಿಕೊಂಡಿದ್ದರು. ಮೊಟ್ಟೆಯನ್ನು ಕೂಡ ತಿನ್ನುತ್ತಿರಲಿಲ್ಲ. ಅದರೊಳಗೆ ಜೀವ ಇದೆ. ಅದನ್ನು ತಿಂದರೆ ಜೀವಹಾನಿಯಾಗುತ್ತದೆ ಎನ್ನುತ್ತಿದ್ದರು. ವಿದ್ಯಾರ್ಥಿಯಾಗಿ ಇಂಗ್ಲೆಂಡಿನಲ್ಲಿದ್ದಾಗ ಆಧುನಿಕ ರೀತಿಯ ಸೂಟುಬೂಟುಗಳನ್ನು ಧರಿಸುತ್ತಿದ್ದರು. ಕ್ರಮೇಣ ಅವರು ಗುಜರಾತಿ ಪೋಷಾಕುಗಳನ್ನು ಧರಿಸಲು ಪ್ರಾರಂಭಿಸಿದರು. ಭಾರತಕ್ಕೆ ಹಿಂದಿರುಗಿದ ಮೇಲೆ ಅವರು ಸೊಂಟದ ಸುತ್ತ ಒಂದು ದಟ್ಟಿಯನ್ನು ಸುತ್ತಿಕೊಳ್ಳುತ್ತಿದ್ದರು. ಒಮ್ಮೆ ಇಂಗ್ಲೆಂಡಿನ ದೊರೆ ಜಾರ್ಜ್ ಬಕಿಂಗ್ ಹ್ಯಾಮ್ ಅರಮನೆಯಲ್ಲಿ ಔತಣಕೂಟವನ್ನು ಏರ್ಪಡಿಸಿದ್ದರು. ಕೂಟಕ್ಕೆ ಗಾಂಧಿಯವರನ್ನೂ ಆಹ್ವಾನಿಸಲಾಗಿತ್ತು. ಯಾವ ಉಡುಪು ಧರಿಸಿ ಬರಬೇಕು ಎಂದು ಆಹ್ವಾನ ಪತ್ರಿಕೆಯಲ್ಲಿ ನಮೂದಿಸಲಾಗಿತ್ತು.
ಗಾಂಧಿ ಹೇಳಿದರು ” ನಾನು ಬಡತನದಿಂದ ಕಮರಿ ಹೋಗಿರುವ ಭಾರತೀಯ ಪ್ರಜೆಗಳ ಸೇವಕ. ಅವರು ತೊಡುವ ಬಟ್ಟೆಯನ್ನೇ ನಾನು ತೊಡುತ್ತೇನೆ. ದೊರೆಯು ಯೂರೋಪ್ ಪೋಷಾಕನ್ನು ಕಡ್ಡಾಯಗೊಳಿಸಿದರೆ ನನಗೆ ಅರಮನೆಯ ಔತಣ ಕೂಟವೇ ಬೇಡ. ನಾನು ಹೋಗುವುದಿಲ್ಲ” ಎಂದು ಒಬ್ಬ ಬ್ರಿಟಿಷ್ ಗೆಳೆಯನಿಗೆ ಹೇಳಿದಂತೆ.