ಮಂಗಳೂರು ದಸರಾ ಪ್ರಯುಕ್ತ 7ಕಿ.ಮೀ ನೈಟ್‌ ಮ್ಯಾರಥಾನ್‌ – ಝೂಯಿಸ್ ಫಿಟ್ನೆಸ್ ಕ್ಲಬ್ ಸಹಯೋಗ – ಎಸಿಪಿ ಮಹೇಶ್‌ ಕುಮಾರ್‌ ಅವರಿಂದ ಮ್ಯಾರಥಾನ್‌ ಗೆ ಚಾಲನೆ

ಮಂಗಳೂರು: ಮಂಗಳೂರು ದಸರಾ ಮಹೋತ್ಸವದ ಅಂಗವಾಗಿ ಝೂಯಿಸ್ ಫಿಟ್ನೆಸ್ ಕ್ಲಬ್ ವತಿಯಿಂದ ಕುದ್ರೋಳಿ ಕ್ಷೇತ್ರದ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ನೈಟ್ ಮ್ಯಾರಥಾನ್ ಸ್ಪರ್ಧೆಗೆ ಸಹಾಯಕ ಪೊಲೀಸ್ ಆಯುಕ್ತ ಮಹೇಶ್ ಕುಮಾರ್ ಫ್ಲಾಗ್‌ ಆಫ್‌ ಮಾಡುವ ಮೂಲಕ ಚಾಲನೆ ನೀಡಿದರು.

ಕುದ್ರೋಳಿ ಕ್ಷೇತ್ರದ ಪ್ರಧಾನ ದ್ವಾರದಿಂದ ಮಣ್ಣಗುಡ್ಡ, ನಾರಾಯಣಗುರು ಸರ್ಕಲ್‌, ಎಂ.ಜಿ. ರಸ್ತೆ, ಪಿವಿಎಸ್, ಕೆ.ಎಸ್.ರಾವ್ ರಸ್ತೆ, ಹಂಪನಕಟ್ಟೆ, ಕ್ಲಾಕ್ ಟವರ್, ಅಳಕೆ ಮೂಲಕ ಸಾಗಿ ಮರಳಿ ಕುದ್ರೋಳಿ ಕ್ಷೇತ್ರಕ್ಕೆ ಆಗಮಿಸುವ ಮೂಲಕ 7 ಕಿ.ಮೀ. ಮ್ಯಾರಥಾನ್ ಯಶಸ್ವಿಯಾಗಿ ನಡೆಯಿತು. ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ಸ್ಪರ್ಧೆ ನಡೆಯಿತು.

LEAVE A REPLY

Please enter your comment!
Please enter your name here