ಮಂಗಳೂರು: ಅಮೆರಿಕಾದ ಲಾಸ್ ಏಂಜಲೀಸ್‌ನಲ್ಲಿ ನಡೆದ ನ್ಯಾಚುರಲ್ ಬಾಡಿ ಬಿಲ್ಡಿಂಗ್ ವರ್ಲ್ಡ್ ಕಪ್ -23ರಲ್ಲಿ ಬೆಂಗಳೂರಿನ ಶೋಧನ್ ರೈ 2 ಚಿನ್ನ ಹಾಗೂ 1 ಬೆಳ್ಳಿ ಪದಕ ಗೆದ್ದಿದ್ದಾರೆ. 40 ದೇಶಗಳ 250ಕ್ಕೂ ಅಧಿಕ ಸ್ಪರ್ಧಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. 2001ರಿಂದ ಭಾರತವನ್ನು ಪ್ರತಿನಿಧಿಸುತ್ತಿರುವ ಶೋಧನ್ ರೈ ವಿವಿಧ ವಿಭಾಗಗಳಲ್ಲಿ ಸ್ಪರ್ಧಿಸಿದ್ದು, ಸತತ 4ನೇ ಬಾರಿ ಚಿನ್ನ ಗೆದ್ದಿದ್ದಾರೆ. ಲಾಸ್‌ವೇಗಸ್‌ನಲ್ಲಿ ನಡೆದ ನ್ಯಾಚುರಲ್ ಒಲಿಂಪಿಯಾ-23ರಲ್ಲಿ ಭಾಗವಹಿಸಿರುವ ಶೋಧನ್ ರೈ ಕಂಚಿನ ಪದಕ ಗೆದ್ದಿದ್ದಾರೆ. ಈ ಸ್ಪರ್ಧೆಯಲ್ಲಿ ಹಂಗೇರಿಯ ಸ್ಪರ್ಧಿ ಚಿನ್ನ ಹಾಗೂ ಸ್ಪೈನ್ ನ ಸ್ಪರ್ಧಿ ಬೆಳ್ಳಿ ಪದಕ ಗೆದ್ದಿದ್ದಾರೆ. 10 ದೇಶಗಳ 500ಕ್ಕೂ ಅಧಿಕ ಬಾಡಿಬಿಲ್ಡರ್‌ಗಳು ಇದರಲ್ಲಿ
ಭಾಗವಹಿಸಿದ್ದರು. ಕರ್ನಾಟಕ ಸರ್ಕಾರದಿಂದ 2013ರಲ್ಲಿ ಏಕಲವ್ಯ ಪ್ರಶಸ್ತಿ ಪುರಸ್ಕೃತರಾಗಿರುವ ಇವರು ಮೂಲತಃ ಪುತ್ತೂರಿನವರಾಗಿದ್ದು, ಅಂತಾರಾಷ್ಟ್ರೀಯ ಬಾಡಿ ಬಿಲ್ಡರ್ ದಿ.ಜೆ.ಎನ್.ರೈ ಅವರ ಪುತ್ರ.