ಮಂಗಳೂರು(ರಾಯಚೂರು): ಬಾಲಕನೊಬ್ಬ ಗುಂಡು ಸೂಜಿ ನುಂಗಿರುವ ಘಟನೆ ರಾಯಚೂರಿನ ಸಿರವಾರ ತಾಲೂಕಿನ ಮುಚ್ಚುಳಗುಡ್ಡ ಕ್ಯಾಂಪ್ ನಲ್ಲಿ ನಡೆದಿದೆ. ಶಿವಕುಮಾರ ದೇವರಾಜ್ (13) ಎನ್ನುವ ಬಾಲಕ ಆಟವಾಡುವ ವೇಳೆ ನೋಟಿಸ್ ಬೋರ್ಡ್ ಗೆ ಅಂಟಿಸುವ ಗುಂಡು ಸೂಜಿಯನ್ನು ಬಾಯಿಯಲ್ಲಿ ಇಟ್ಟುಕೊಂಡು ಆಕಸ್ಮಿಕವಾಗಿ ನುಂಗಿದ್ದಾನೆ.
ನುಂಗಿದ್ದ ಗುಂಡು ಸೂಜಿಯು ಬಲ ಶ್ವಾಸಕೋಶದೊಳಗಡೆ ಸೇರಿದ್ದು, ರಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬಳಿಕ ಬಾಲಕನ ಶ್ವಾಸಕೋಶದ ಎಕ್ಸ್ ರೇ ಮಾಡಿದಾಗ ಬಲ ಶ್ವಾಸಕೋಶದಲ್ಲಿ ಗುಂಡು ಸೂಜಿ ಇರುವುದು ಖಚಿತವಾಗಿದೆ. ಬಳಿಕ ವೈದ್ಯರು ಬ್ರಾಂಕೋಸ್ಕೋಪಿ ಶಸ್ತ್ರಚಿಕಿತ್ಸೆಯ ಮೂಲಕ ಗುಂಡು ಸೂಜಿಯನ್ನು ಹೊರ ತೆಗೆದಿದ್ದಾರೆ.