ಮಂಗಳೂರು(ಉತ್ತರ ಪ್ರದೇಶ): ಶ್ರೀರಾಮ ಜನ್ಮಭೂಮಿ ಸ್ಥಳದಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ರಾಮ ಮಂದಿರದ ಉದ್ಘಾಟನೆಗೆ ದಿನ ನಿಗದಿಯಾಗುತ್ತಲೇ ಜನರು ರಾಮಲಲ್ಲನಿಗೆ ಕಾಣಿಕೆ ನೀಡಲು ಮುಂದಾಗಿದ್ದಾರೆ. ವ್ಯಕ್ತಿಯೊಬ್ಬರು ರಾಜಸ್ಥಾನದಿಂದ ಎತ್ತಿನ ಗಾಡಿಯಲ್ಲಿ ರಾಮನಗರಿ ಅಯೋಧ್ಯೆಗೆ 600 ಕೆಜಿಯಷ್ಟು ಪರಿಶುದ್ಧ ತುಪ್ಪದೊಂದಿಗೆ ಬಂದು ತಲುಪಿದ್ದಾರೆ.
ಜ. 22 ರಂದು ಮಂದಿರದ ಗರ್ಭಗೃಹದಲ್ಲಿ ರಾಮ ಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನಾ ಕಾರ್ಯ ನಡೆಯಲಿದ್ದು, ಇದರ ಪೂರ್ವಭಾವಿಯಾಗಿ ಧಾರ್ಮಿಕ ವಿಧಿ ವಿಧಾನಗಳು ಭರದಿಂದ ಸಾಗುತ್ತಿದೆ. ಈ ಕಾರ್ಯಕ್ರಮದ ಭಾಗವಾಗಿ ಹಲವರು ಶ್ರೀರಾಮನಿಗೆ ತಮ್ಮಿಷ್ಟದ ಕಾಣಿಕೆಯನ್ನು ದೇಣಿಗೆ ರೂಪದಲ್ಲಿ ಮತ್ತು ಕೆಲವರು ಸೇವಾ ರೂಪದಲ್ಲಿ ಸಲ್ಲಿಸುತ್ತಿದ್ದಾರೆ. ಜೋಧ್‌ಪುರದ ರಾಮ ಭಕ್ತರೊಬ್ಬರು ತಂದ ಈ ಶುದ್ಧ ತುಪ್ಪದಿಂದ ಶ್ರೀರಾಮಚಂದ್ರನಿಗೆ ಮೊದಲ ಆರತಿ ನಡೆಯಲಿದೆ. ಭಗವಾನ್ ಶ್ರೀರಾಮನ ವಿಗ್ರಹದ ಪ್ರಾಣಪ್ರತಿಷ್ಠಾಪನೆಗಾಗಿ ರಾಜಸ್ಥಾನದ ಜೋಧ್‌ಪುರದಿಂದ 600 ಕೆಜಿಯಷ್ಟು ಪರಿಶುದ್ಧ ತುಪ್ಪ ಎತ್ತಿನಗಾಡಿ ಮೂಲಕ ಅಯೋಧ್ಯೆಗೆ ಬಂದು ತಲುಪಿದೆ.