ಸುಸ್ಥಿರ ಜೀವನಕ್ಕಾಗಿ ಯುವ ಮನಸ್ಸುಗಳನ್ನು ಸಶಕ್ತಗೊಳಿಸುವುದು-ಡಾ. ಎಂ ವಿ ಶೆಟ್ಟಿ ಇನ್ಸ್ಟಿಟ್ಯೂಟ್ ಆಫ್ ಪ್ರೊಫೆಷನಲ್ ಸೈಯನ್ಸ್ ಆ್ಯಂಡ್ ಮ್ಯಾನೇಜ್ಮೆಂಟ್ ಕಾಲೇಜಿನಲ್ಲೊಂದು ಕಾರ್ಯಾಗಾರ

ಮಂಗಳೂರು: ಮಂಗಳೂರಿನ ಕಾವೂರು ವಿದ್ಯಾನಗರದಲ್ಲಿರುವ ಡಾ. ಎಂ ವಿ ಶೆಟ್ಟಿ ಇನ್ಸ್ಟಿಟ್ಯೂಟ್ ಆಫ್ ಪ್ರೊಫೆಷನಲ್ ಸೈಯನ್ಸ್ ಆ್ಯಂಡ್ ಮ್ಯಾನೇಜ್ಮೆಂಟ್ ಸಂಸ್ಥೆಯಲ್ಲಿ ಸುಸ್ಥಿರ ಜೀವನಕ್ಕಾಗಿ ಯುವ ಮನಸ್ಸುಗಳನ್ನು ಸಶಕ್ತಗೊಳಿಸುವುದು ಎಂಬ ವಿಚಾರದಲ್ಲಿ ಕಾರ್ಯಾಗಾರವು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಗಣ್ಯರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬೆಂಗಳೂರಿನ ಸಾಹಸ್ ಸಂಸ್ಥೆಯ ಪ್ರಾಜೆಕ್ಟ್ ಕೋ-ಆರ್ಡಿನೇಟರ್, ಕಾರ್ತಿಕ್ ಜಕ್ಕಣ್ಣವರ್ ಮಾತನಾಡಿ, ನಾನೊಬ್ಬ ಸಿವಿಲ್ ಇಂಜಿನಿಯರ್ ಆದರೆ ಪರಿಸರ, ಪ್ರಕೃತಿಯ ಮಾಲಿನ್ಯಗಳನ್ನು ಗಮನಿಸಿ ಪ್ರಕೃತಿಯ ರಕ್ಷಣೆಗಾಗಿ ಪರಿಸರ ವಿಷಯದಲ್ಲಿ ಇಂಜಿನಿಯರಿಂಗ್ ಆಯ್ಕೆ ಮಾಡಿಕೊಂಡೆ. ಪ್ರತಿಕೂಲ ಪರಿಸರ ಪರಿಣಾಮಗಳಿಂದ ಜನರನ್ನು ರಕ್ಷಿಸುವುದರ ಜೊತೆಗೆ ಪರಿಸರ ವ್ಯವಸ್ಥೆಗಳನ್ನು ರಕ್ಷಿಸುವುದು ನಮ್ಮ ಕರ್ತವ್ಯ, ಪರಿಸರ ಎಂದರೆ ಹಸಿರು, ಮಾಲಿನ್ಯ ಎಂದರೆ ಕೇವಲ ಕಸಕಡ್ಡಿಗಳನ್ನು ಹೆಕ್ಕಿ ಶುಚಿಗೊಳಿಸುವುದು ಮಾತ್ರವಲ್ಲ. ಇವೆಲ್ಲಕಿಂತಲೂ ಹಲವಾರು ಮಾಲಿನ್ಯಗಳು ಪರಿಸರದಲ್ಲಿದೆ. ವಿದ್ಯಾರ್ಥಿಗಳಾದ ನೀವು ಪರಿಸರ ಸಂರಕ್ಷಣೆಯಲ್ಲಿ ತೊಡಗಿಸಿಕೊಳ್ಳಬೇಕು, ಸುಸ್ಥಿರ ಜೀವನಕ್ಕಾಗಿ ಯುವಜನತೆ ಪಣತೋಡಬೇಕು ಎಂದರು.

ಅಕಾಡೆಮಿಕ್ಸ್ ಡೈರೆಕ್ಟರ್ ಸುಮಾ ಎಸ್ ರೈ ಮಾತನಾಡಿ, ಪರಿಸರ ಮಾಲಿನ್ಯ ಅತೀ ದೊಡ್ಡ ಸಮಸ್ಯೆ, ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಬಹುದೊಡ್ಡ ಸಮಸ್ಯೆ. ಯುವಜನತೆಯಿಂದ ಮಾತ್ರ ಪರಿಸರದ ಮೇಲೆ ಉಂಟಾಗುತ್ತಿರುವ ದುಷ್ಪರಿಣಾಮವನ್ನು ತಡೆಯಬಹುದು, ಮುಂದಿನ ಸುಸ್ಥಿರ ಜೀವನಕ್ಕಾಗಿ ವಿದ್ಯಾರ್ಥಿಗಳು ಯುವಜನತೆ ತಮ್ಮನ್ನು ತೊಡಗಿಸಿಕೊಳ್ಳಬೇಕು. ಪರಿಸರವು ಯಾರದೇ ಸಂಪತ್ತು ಅಲ್ಲ ಅದನ್ನು ಕಾಪಾಡುವುದು ನಮ್ಮೆಲ್ಲರ ಹೊಣೆ ಎಂದರು. ಪ್ರೊ.ಸ್ವಾತಿ ಕಾರ್ಯಾಗಾರದ ಉದ್ದೇಶವನ್ನು ವಿವರಿಸಿದರು. ಡಾ.ಎಂ.ವಿ ಶೆಟ್ಟಿ ಮೆಮೋರಿಯಲ್ ಟ್ರಸ್ಟ್, ಮಂಗಳೂರು ಇದರ ಟ್ರಸ್ಟಿ ಡಾ ದಿವ್ಯಾಂಜಲಿ ಶೆಟ್ಟಿ ಕಾಲೇಜಿನ ಬೆಳ್ಳಿ ಹಬ್ಬದ ಲಾಂಛನವನ್ನು ಬಿಡುಗಡೆ ಗೊಳಿಸಿದರು. ಇ-ಪೊಸ್ಟರ್, ಮಾಡೆಲ್ ಮೇಕಿಂಗ್ ಸ್ಪರ್ಧೆ ಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಪ್ರೊ.ಡಾ. ಪ್ರಕಾಶ್ ಅಮೀನ್, ಸ್ವಾಗತಿಸಿದರು. ಕೋರ್ಸ್ ಕೋ ಆರ್ಡಿನೇಟರ್ ಸ್ವಪ್ನಾ ಶೆಟ್ಟಿ, ವಂದಿಸಿದರು. ಕಾರ್ಯಾಗಾರದ ಸಂಯೋಜಕಿ ರಶ್ಮಿತಾ ವೇಗಸ್ ಕಾರ್ಯಕ್ರಮ ನಿರೂಪಿಸಿದರು. ಪ್ರಜ್ಞಾ ಕೃಷ್ಣನ್ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here