



ಮಂಗಳೂರು (ಪಾಟ್ನಾ): ಅರ್ಚಕರೊಬ್ಬರ ಕಣ್ಣುಗಳನ್ನು ಕಿತ್ತು, ಜನನಾಂಗ ಕತ್ತರಿಸಿ ಭೀಕರವಾಗಿ ಹತ್ಯೆ ಮಾಡಿರುವ ಭೀಕರ ಘಟನೆ ಬಿಹಾರದ ಗೋಪಾಲ್ ಗಂಜ್ ಜಿಲ್ಲೆಯಲ್ಲಿ ನಡೆದಿದೆ.



ಕಳೆದ ಡಿ.16ರ ರಾತ್ರಿ ದಾನಾಪುರ ಗ್ರಾಮದ ಶಿವನ ದೇವಸ್ಥಾನದಿಂದ 32 ವಯಸ್ಸಿನ ಮನೋಜ್ ಕುಮಾರ್ ನಾಪತ್ತೆಯಾಗಿದ್ದರು. ಶನಿವಾರ ಸಂಜೆ ಅರ್ಚಕ ಮನೋಜ್ ಕುಮಾರ್ ಮೃತದೇಹವನ್ನು ಪೊದೆಯಿಂದ ಹೊರತೆಗೆಯಲಾಯಿತು. ಮೃತದೇಹದ ಖಾಸಗಿ ಅಂಗಗಳಲ್ಲಿ ಗಾಯಗಳೂ ಕಂಡುಬಂದಿತ್ತು.



ಅರ್ಚಕರ ಶವ ಪತ್ತೆಯಾದ ಕೂಡಲೇ ಗ್ರಾಮದಲ್ಲಿ ಘರ್ಷಣೆ ನಡೆದಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಪೊಲೀಸರ ಮೇಲೆ ಕಲ್ಲು ತೂರಾಟ ಮಾಡಿ ಪೊಲೀಸ್ ವಾಹನಕ್ಕೂ ಬೆಂಕಿ ಹಚ್ಚಿದ್ದಾರೆ.















