ಪತ್ನಿಯ ಅಕ್ರಮ ಸಂಬಂಧ – ರೈಲ್ವೇ ಟ್ರ್ಯಾಕ್‌ಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಪತಿ

ಮಂಗಳೂರು(ಬೆಂಗಳೂರು): ಪತ್ನಿಯ ಅಕ್ರಮ ಸಂಬಂಧಕ್ಕೆ ಬೇಸತ್ತ ಗಂಡ ರೈಲ್ವೇ ಟ್ರ್ಯಾಕ್‌ಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಲದೇವನಹಳ್ಳಿ ಬಳಿಯಲ್ಲಿ ನಡೆದಿದೆ. ಮೃತರನ್ನು ರಮೇಶ್ ಎಂದು ಗುರುತಿಸಲಾಗಿದೆ.

ತನ್ನ ಸಾವಿಗೆ ಹೆಂಡತಿ ಶಿಲ್ಪಾ ಮತ್ತು ಆಕೆಯ ಪ್ರಿಯಕರ ಸಂಜು ಎಂಬವರು ಕಾರಣ ಎಂದು ಡೆತ್ ನೋಟ್‌ ಬರೆದು, ಇಬ್ಬರ ಫೋಟೋವನ್ನು ಸ್ಟೇಟಸ್ ಹಾಕಿ, ಇಬ್ಬರಿಗೂ ಶಿಕ್ಷೆ ನೀಡಿ ಎಂದು ಬರೆದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಘಟನೆಯ ಕುರಿತು ಯಶವಂತಪುರ ರೈಲ್ವೇ ಪೊಲೀಸ್‌ ಠಾಣೆಯಲ್ಲಿ ಶಿಲ್ಪಾ ಮತ್ತು ಇನ್ನೋರ್ವ ವ್ಯಕ್ತಿಯ ಮೇಲೆ ಎಫ್‌ಐಆ‌ರ್ ದಾಖಲಾಗಿದೆ.

LEAVE A REPLY

Please enter your comment!
Please enter your name here