ಮಂಗಳೂರು(ಬೆಂಗಳೂರು): ಕೋವಿಡ್ ಹಿನ್ನೆಲೆಯ ಜೆಎನ್ 1 ರೂಪಾಂತರಿಯು ಅಂತರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಪ್ರಮಾಣದಲ್ಲಿ ಹರಡಿದೆ. ಅಮೆರಿಕ ಯೂರೋಪ್ ರಾಷ್ಟ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದೆ. ಬಹಳ ವೇಗವಾಗಿ ಹರಡುವ ವೈರಾಣಾಗಿದೆ. ಆದರೆ ಇದು ಹಾನಿಕಾರಕ ಅಲ್ಲ, ಸಾವು ಕೂಡಾ ವಿರಳ. ಈ ನಿಟ್ಟಿನಲ್ಲಿ ಆತಂಕ ಹಾಗೂ ಭಯ ಸೃಷ್ಟಿ ಅಗತ್ಯ ಇಲ್ಲ. ಆದರೂ ಎಚ್ಚರಿಕೆಯಿಂದ ಇರಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಡಿ.20ರಂದು ವಿಕಾಸಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ದೇಶದಲ್ಲಿ 20 ಜೆ ಎನ್ 1 ಪ್ರಕರಣಗಳಿದ್ದು, ಗೋವಾದಲ್ಲಿ 18, ಮಹಾರಾಷ್ಟ್ರ ಹಾಗೂ ಕೇರಳದಲ್ಲಿ 1 ಪತ್ತೆಯಾಗಿದೆ. ನಮ್ಮಲ್ಲಿ 24 ಗಂಟೆಯಲ್ಲಿ 1020 ಟೆಸ್ಟಿಂಗ್ ಆಗಿದೆ. ಪ್ರತಿ ದಿನ ಇದನ್ನು ಹೆಚ್ಚಳ ಮಾಡಬೇಕು ಉದ್ದೇಶ ಇದೆ. ಸಾರಿ ಕೇಸ್ ಗಳನ್ನು ಆರ್ ಟಿ ಪಿ ಸಿ ಆರ್ ಮಾಡಬೇಕು. ವೆಂಟಿಲೇಟರ್ ನಿರ್ವಹಣೆಗೆ ಸಹಕಾರ ಕೊಡಬೇಕು ಎಂದು ಮನವಿ ಮಾಡಿದ್ದೇವೆ. ಐಸಿಎಂಆರ್ ಫೋರ್ಟಲ್ ಡೇಟಾ ಮಾಹಿತಿ ಸಿಗುತ್ತಿಲ್ಲ. ಪೋರ್ಟಲ್ ಸರಿಪಡಿಸಲು ಮನವಿ ಮಾಡಿದ್ದೇವೆ ಎಂದು ತಿಳಿಸಿದರು. ಕೇರಳದಲ್ಲಿ ಐದು ಜನರ ಸಾವಿನ ಪ್ರಕರಣಗಳು ವರದಿಯಾಗಿದ್ದು ಹಾರ್ಟ್, ಕ್ಯಾನ್ಸರ್ ಸಮಸ್ಯೆ ಇದ್ದವರಿಗೆ ಕೋವಿಡ್ ಆದಾಗ ಸಾವು ಸಂಭವಿಸಿದೆ. ಕರ್ನಾಟಕದಲ್ಲಿ ಒಂದು ಸಾವು ಆಗಿದ್ದು, ಅವರಿಗೆ ಹೃದಯ ಸಂಬಂಧಿ ಕಾಯಿಲೆ ಮತ್ತು ಟಿಬಿ ಕಾಯಿಲೆ ಕೂಡಾ ಇತ್ತು. ಜೊತೆಗೆ ಕೋವಿಡ್ ಬಂದ ಹಿನ್ನಲೆಯಲ್ಲಿ ಅವರ ಸಾವು ಆಗಿದೆ ಎಂದರು.
ಕಡ್ಡಾಯವಾಗಿ ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಮಾಸ್ಕ್ ಹಾಕಲು ಸೂಚನೆ ನೀಡಲಾಗಿದೆ. ಅಂತಾರಾಷ್ಟ್ರೀಯ ಪ್ರಯಾಣಿಕರ ಬಗ್ಗೆ ಏನು ಕ್ರಮ ಎಂಬ ಬಗ್ಗೆ ಪ್ರಶ್ನೆ ಮಾಡಿದ್ದೆ. ಆದರೆ ಅದರ ಬಗ್ಗೆ ಯಾವುದೇ ನಿಬಂಧನೆಗಳು ಇಲ್ಲ ಎಂದಿದ್ದಾರೆ. ಗಡಿ ಭಾಗದಲ್ಲಿ ನಿಬಂಧನೆಗಳ ಬಗ್ಗೆ ಕೇಂದ್ರ ಸೂಚನೆ ನೀಡಿಲ್ಲ. ಜನರು ತಮ್ಮ ದೈನಂದಿನ ಕೆಲಸ ಕಾರ್ಯಗಳನ್ನು ಮಾಡಲಿ. ಹೆಚ್ಚು ಜನಜಂಗುಳಿ ಇರುವ ಪ್ರದೇಶದಲ್ಲಿ ಮಾಸ್ಕ್ ಹಾಕಿದರೆ ಉತ್ತಮ ಎಂದು ತಿಳಿಸಿದರು. ಪತ್ತಿಕಾಗೋಷ್ಠಿಯಲ್ಲಿ ಕೇಂದ್ರ ಆರೋಗ್ಯ ಸಚಿವ, ಉನ್ನತ ಅಧಿಕಾರಿಗಳು ಹಾಗೂ ಎಲ್ಲಾ ರಾಜ್ಯದ ಆರೋಗ್ಯ ಅಧಿಕಾರಿಗಳು ಉಪಸ್ಥಿತರಿದ್ದರು.