ಲುಧಿಯಾನ ಫ್ಲೈಓವರ್‌ನಲ್ಲಿ ಡಿವೈಡರ್‌ಗೆ ಡಿಕ್ಕಿ ಹೊಡೆದ ತೈಲ ಟ್ಯಾಂಕರ್‌-ಉರುಳಿ ಬಿದ್ದ ಟ್ಯಾಂಕರ್‌ ಗೆ ಬೆಂಕಿ  

ಮಂಗಳೂರು(ಲುಧಿಯಾನ): ಪಂಜಾಬ್‌ನ ಲುಧಿಯಾನದ ಖನ್ನ ಪ್ರದೇಶದ ರಾಷ್ಟ್ರೀಯ ಹೆದ್ದಾರಿಯ ಫ್ಲೈಓವರ್‌ನಲ್ಲಿ ಇಂಧನ ಟ್ಯಾಂಕರೊಂದು ಡಿವೈಡರ್‌ಗೆ ಢಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ಉರುಳಿ ಬಿದ್ದ ಟ್ಯಾಂಕರ್‌ ಗೆ ಬೆಂಕಿ ಹತ್ತಿಕೊಂಡಿದೆ. ಪರಿಣಾಮ ಸ್ಥಳದ ತುಂಬೆಲ್ಲಾ ಬೆಂಕಿಯ ಜ್ವಾಲೆಗಳು ಹಾಗೂ ದಟ್ಟ ಹೊಗೆ ಆವರಿಸಿದೆ. ವಾಹನ ಸಂಚಾರಕ್ಕೂ ಅಡಚಣೆಯಾಗಿದ್ದು ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ. ಈ ಘಟನೆಯ ಸಾವು ನೋವಿನ ಬಗ್ಗೆ ಯಾವುದೇ ಮಾಹಿತಿ ತಿಳಿದು ಬಂದಿಲ್ಲ.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

 

LEAVE A REPLY

Please enter your comment!
Please enter your name here