ದ.ಕ ಲೋಕಸಭಾ ಚುನಾವಣೆ ಹಿನ್ನೋಟ-1951 ರಿಂದ 2019(ಭಾಗ-2/2)

ಭಾರತ ಜಗತ್ತಿನಲ್ಲೇ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ನಿಜವಾದ ಹಾಗೂ ಪರಮೋನ್ನೊತ ಪ್ರಭುಗಳು. ಮಹಾ ಚುನಾವಣೆ ಪ್ರಜಾಪ್ರಭುತ್ವ ವ್ಯವಸ್ಥೆಯ ಹಬ್ಬ, ಮತದಾನ ದೇಶದ ಜನತೆಯ ಶಕ್ತಿ ಔನ್ನತ್ಯಗಳ ಹಾಗೂ ಪರಮ ಪ್ರಭುತ್ವದ ಸಂಕೇತ. ದೇಶ ಸ್ವಾತಂತ್ರ್ಯ ಪಡೆದು 4 ವರ್ಷಗಳ ಬಳಿಕ 1951-52ರಲ್ಲಿ ಪ್ರಥಮ ಮಹಾ ಚುನಾವಣೆ ನಡೆದಿತ್ತು. ಕಳೆದ ಏಳು ದಶಕಗಳಿಂದ ಸಾರ್ವತ್ರಿಕ ಚುನಾವಣೆಗಳು ಯಶಸ್ವಿಯಾಗಿ ನಡೆಯುತ್ತಿವೆ. ಪ್ರಜಾಪ್ರಭುತ್ವ ವ್ಯವಸ್ಥೆ ಭದ್ರ ನೆಲೆ ಕಂಡಿದೆ. 1951 ರಿಂದ 2019ರ ವರೆಗಿನ ದ.ಕ ಲೋಕಸಭಾ ಚುನಾವಣಾ ಮಾಹಿತಿ ಇಲ್ಲಿದೆ. (ಮುಂದುವರಿದ ಭಾಗ)

ಬಿಜೆಪಿ ಜಯಭೇರಿ
1991ರ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಧನಂಜಯ ಕುಮಾರ್‌ರನ್ನು ಕಣಕ್ಕಿಳಿಸಿತು. ರಾಮ ಮಂದಿರ ಹೋರಾಟದ ಶಕ್ತಿಯಿಂದ ಬಿಜೆಪಿ ಪ್ರಬಲ ಹೋರಾಟ ನೀಡುವ ಸೂಚನೆ ನೀಡಿತ್ತು. ಆದರೆ ಚುನಾವಣೆ ಪ್ರಚಾರದ ಸಂದರ್ಭದಲ್ಲೇ ರಾಜೀವ್ ಗಾಂಧಿ ಹತ್ಯೆ. ಕಾಂಗ್ರೆಸ್ ಪರ ಅನುಕಂಪದ ಅಲೆ ನಿರೀಕ್ಷಿಸಲಾಗಿತ್ತು. ಸಿಪಿಎಂ, ಜನತಾ ಪಾರ್ಟಿ ಸೇರಿದಂತೆ ಒಟ್ಟು 8 ಅಭ್ಯರ್ಥಿಗಳಿದ್ದರು. ಫಲಿತಾಂಶ ಘೋಷಣೆಯಾದಾಗ ಎಲ್ಲ ರಾಜಕೀಯ ಲೆಕ್ಕಾಚಾರ ತಲೆಕೆಳಗಾಯಿತು. ನಾಲ್ಕು ಬಾರಿ ಗೆದ್ದ ಪೂಜಾರಿ ಅವರನ್ನು 35 ಸಾವಿರ ಮತಗಳ ಅಂತರದಿಂದ ಸೋಲಿಸುವ ಮೂಲಕ ಬಿಜೆಪಿ ಜಯಭೇರಿ ಬಾರಿಸಿತು. ಧನಂಜಯ ಕುಮಾರ್ ಪ್ರಥಮ ಬಾರಿಗೆ ಲೋಕಸಭೆ ಪ್ರವೇಶಿಸಿದರು.

ನಿರ್ಣಾಯಕವಾದ ದಳ :
1996ರ ಚುನಾವಣೆ… ಮತ್ತೆ ಧನಂಜಯ ಕುಮಾರ್ ಮತ್ತು ಜನಾರ್ದನ ಪೂಜಾರಿ ಮುಖಾಮುಖಿ. ಜನತಾದಳದಿಂದ ಕೊಡಗಿನ ಪ್ರಭಾವಿ ನಾಯಕ ಜೀವಿಜಯ ಕಣಕ್ಕಿಳಿದರು. ಜತೆಗೆ 9 ಮಂದಿ ಪಕ್ಷೇತರರು. ಈ ಚುನಾವಣೆಯಲ್ಲಿ ಜನತಾದಳ ನಿರ್ಣಾಯಕ ಪಾತ್ರ ವಹಿಸಿತು. ಜೀವಿಜಯ 1.80 ಲಕ್ಷ ಮತಗಳಿಸಿರು. ಕಾಂಗ್ರೆಸ್‌ಗೆ 14 ಸಾವಿರ ಮಂತಗಳ ಅಂತರದ ಸೋಲು, ಧನಂಜಯರಿಗೆ ಸತತ 2ನೇ ಜಯ. 13 ದಿನದ ವಾಜಪೇಯಿ ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವ ಅವಕಾಶವೂ ದೊರೆಯಿತು.

ಧನಂಜಯರ ಹ್ಯಾಟ್ರಿಕ್ ಜಯ
ಎರಡೇ ವರ್ಷದಲ್ಲಿ ಮತ್ತೆ (1998) ಚುನಾವಣೆ. ಒಟ್ಟು ಆರು ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಈ ಬಾರಿ ಜನಾರ್ದನ ಪೂಜಾರಿ ಪ್ರಬಲ ಸ್ಪರ್ಧೆ ನೀಡಿದರೂ ವಾಜಪೇಯಿ ಪರ ಅಲೆಯಿಂದ ಧನಂಜಯರು ಹ್ಯಾಟ್ರಿಕ್ ಜಯ ಸಾಧಿಸಿದರು. ಕಾಂಗ್ರೆಸ್‌ಗೆ ಕೇವಲ 6907 ಮತಗಳ ಅಂತರದ ಸೋಲು. ಹಿಂದಿನ ಚುನಾವಣೆಯಲ್ಲಿ 1.80 ಲಕ್ಷ ಮತಗಳಿಸಿದ್ದ ಜನತಾ ದಳ 28 ಸಾವಿರಕ್ಕೆ ಕುಸಿದಿತ್ತು.

ವೀರಪ್ಪ ಮೊಯ್ಲಿ ಸ್ಪರ್ಧೆ
1998ರಿಂದ ಹದಿಮೂರು ತಿಂಗಳು ಆಡಳಿತ ನಡೆಸಿದ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರ ವಿಶ್ವಾಸಮತ ಯಾಚಿಸಿದಾಗ ಕೇವಲ ಒಂದು ಮತದಿಂದ ಸೋಲು ಕಂಡಿತು. ಪರಿಣಾಮ 1999ರಲ್ಲಿ ಮತ್ತೆ ಲೋಕಸಭೆಗೆ ಚುನಾವಣೆ. ಕರ್ನಾಟಕ ವಿಧಾನಸಭೆಗೂ ಚುನಾವಣೆ ಘೋಷಣೆಯಾಗಿತ್ತು. ಮಂಗಳೂರು ಕ್ಷೇತ್ರದಲ್ಲಿ ಸತತ ಮೂರು ಜಯ ದಾಖಲಿಸಿದ್ದ ಬಿಜೆಪಿ ಮತ್ತೆ ಧನಂಜಯ ಕುಮಾರ್‌ರನ್ನು ಕಣಕ್ಕಿಳಿಸಿತು. ಸತತ 3 ಸೋಲು ಅನುಭವಿಸಿದ ಜನಾರ್ದನ ಪೂಜಾರಿ ಅವರು ಕಾಂಗ್ರೆಸ್ ಟಿಕೆಟ್ ವಂಚಿತರಾದರು. 98ರ ಚುನಾವಣೆಯಲ್ಲಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದ ವೀರಪ್ಪ ಮೊಯ್ಲಿ ಮಂಗಳೂರು ಕ್ಷೇತ್ರದ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.

ತ್ರಿಕೋನ ಸ್ಪರ್ಧೆ
ಕಾಂಗ್ರೆಸ್‌ನ ಮಹಿಳಾ ನಾಯಕಿ ಲೋಕೇಶ್ವರಿ ವಿನಯಚಂದ್ರ ಪಕ್ಷ ತೊರೆದು ಜೆಡಿಎಸ್‌ನಿಂದ ಕಣಕ್ಕಿಳಿದರು. ವಾಜಪೇಯಿ ಪರ ಅನುಕಂಪದ ಅಲೆ, ಜೆಡಿಎಸ್ ಸ್ಪರ್ಧೆ… ಎರಡೂ ಮೊಯ್ಲಿ ಅವರಿಗೆ ಮುಳುವಾಯಿತು. ತ್ರಿಕೋನ ಸ್ಪರ್ಧೆಯಲ್ಲಿ ಕೇವಲ 8,469 ಮತಗಳ ಅಂತರದ ಸೋಲು. ಮರು ಎಣಿಕೆ ನಡೆದರೂ ಪ್ರಯೋಜನವಾಗಲಿಲ್ಲ. ಧನಂಜಯರು 4 ನೇ ಬಾರಿ ಸಂಸದರಾದರು. ಕೇಂದ್ರದಲ್ಲಿ ಮತ್ತೆ ಸಚಿವರಾದರು.

ಧನಂಜಯರಿಗೆ ಕೊಕ್
2004ರಲ್ಲಿಯೂ ಲೋಕಸಭೆ ಮತ್ತು ವಿಧಾನಸಭೆಗೆ ಏಕಕಾಲದಲ್ಲಿ ಚುನಾವಣೆ… 4 ಬಾರಿಯ ಸಂಸದ ಧನಂಜಯ ಕುಮಾ‌ರ್ ಅವರ ಬದಲಾವಣೆ ಪುತ್ತೂರಿನಲ್ಲಿ ಶಾಸಕರಾಗಿ ಮಿಂಚಿದ್ದ ಡಿ.ವಿ. ಸದಾನಂದ ಗೌಡರನ್ನು ಅಭ್ಯರ್ಥಿಯಾಗಿಸಲು ಬಿಜೆಪಿ ನಿರ್ಧರಿಸಿತು. ವೀರಪ್ಪ ಮೊಯ್ಲಿ ಮತ್ತೆ ಕಾಂಗ್ರೆಸ್‌ನಿಂದ ಕಣಕ್ಕಿಳಿದರು. ಕೊಡಗಿನ ಎ.ಕೆ.ಸುಬ್ಬಯ್ಯ ಜೆಡಿಎಸ್‌ ಅಭ್ಯರ್ಥಿ, ಚುನಾವಣೆಯಲ್ಲಿ ಬಿಜೆಪಿ ಕೋಟೆ ಭದ್ರವಾಗಿಯೇ ಉಳಿಯಿತು. ಡಿ.ವಿ. ಜಯ ಸಾಧಿಸಿ ಪ್ರಥಮ ಬಾರಿಗೆ ಲೋಕಸಭೆ ಪ್ರವೇಶಿಸಿದರು.

ಯಶಸ್ವಿಯಾದ ಬಿಜೆಪಿ ಪ್ರಯೋಗ
2009ರ ಚುನಾವಣೆ… ಕ್ಷೇತ್ರ ಪುನರ್ ವಿಂಗಡಣೆಯಾಗಿ ಕೊಡಗು ಕಳಚಿಕೊಂಡಿತು. ದಕ್ಷಿಣ ಕನ್ನಡ ಜಿಲ್ಲೆಯ 5 ತಾಲೂಕಿಗೆ ಮಾತ್ರ ಸೀಮಿತವಾದ ಕ್ಷೇತ್ರ ರೂಪುಗೊಂಡಿತು. ಈ ಬಾರಿ ಸದಾನಂದ ಗೌಡರನ್ನು ಉಡುಪಿ ಕ್ಷೇತ್ರಕ್ಕೆ ಶಿಫ್ಟ್ ಮಾಡಿದ ಬಿಜೆಪಿ ಸಾಮಾನ್ಯ ಕಾರ್ಯಕರ್ತ ನಳಿನ್‌ ಕುಮಾರ್ ಕಟೀಲ್‌ರಿಗೆ ಟಿಕೆಟ್ ನೀಡುವ ಮೂಲಕ ಹೊಸ ಪ್ರಯೋಗ ಮಾಡಿತು. ಮತ್ತೆ ಕಾಂಗ್ರೆಸ್ ಟಿಕೆಟ್ ಗಿಟ್ಟಿಸಿದ ಜನಾರ್ದನ ಪೂಜಾರಿ ಅವರು 8ನೇ ಬಾರಿ ಕಣಕ್ಕಿಳಿದರು. ಬಿಜೆಪಿಯ ಹಿರಿಯ ನಾಯಕ ರಾಮ ಭಟ್ ಸ್ವಾಭಿಮಾನಿ ವೇದಿಕೆಯಿಂದ ಸವಾಲೊಡ್ಡಿದರು. ಕಣದಲ್ಲಿ ಒಟ್ಟು 11 ಅಭ್ಯರ್ಥಿಗಳು. ಮತ್ತೆ ಬಿಜೆಪಿಯ ಹೊಸ ಪ್ರಯೋಗ ಯಶಸ್ವಿಯಾಗಿತ್ತು. 40 ಸಾವಿರ ಮತಗಳ ಅಂತರದಿಂದ ಗೆದ್ದ ನಳಿನ್‌ ಕುಮಾ‌ರ್ ಕಟೀಲ್ ಸಂಸತ್‌ ಗೆ ಪ್ರವೇಶ ಪಡೆದರು.

ಸತತ 2ನೇ ಜಯ
2014ರ ಚುನಾವಣೆ. ನಳಿನ್‌ ಕುಮಾರ್ ಕಟೀಲ್ ಮತ್ತೆ ಬಿಜೆಪಿ ಅಭ್ಯರ್ಥಿ, ಕಾಂಗ್ರೆಸ್‌ನ ಅಂತರಿಕ ಚುನಾವಣೆ ಮೂಲಕ ಗೆದ್ದ ಜನಾರ್ದನ ಪೂಜಾರಿ ಅವರು 9ನೇ ಬಾರಿ ಕಣಕ್ಕಿಳಿದರು. ಎಸ್‌ಡಿಪಿಐ, ಸಿಪಿಎಂ, ಆಪ್, ಬಿಎಸ್‌ಪಿ, ಪಕ್ಷೇತರರ ಸಹಿತ ಒಟ್ಟು 14 ಅಭ್ಯರ್ಥಿಗಳು ಕಣದಲ್ಲಿದ್ದರು. ದೇಶದೆಲ್ಲೆಡೆ ನರೇಂದ್ರ ಮೋದಿ ಅಲೆ. ಕರಾವಳಿಯಲ್ಲೂ ಈ ಅಲೆ ಬಲವಾಗಿ ಬೀಸಿತ್ತು. ನಳಿನ್‌ ಕುಮಾರ್ ಕಟೀಲ್ ದಾಖಲೆಯ 1.43 ಲಕ್ಷ ಮತಗಳ ಅಂತರದ ಜಯ ಸಾಧಿಸಿ ಸತತ 2ನೇ ಬಾರಿಗೆ ಸಂಸದರಾದರು.

ಕಟೀಲ್ ಹ್ಯಾಟ್ರಿಕ್ ಜಯ
2019ರ ಚುನಾವಣೆ. ನಳಿನ್ ಕುಮಾರ್ ಕಟೀಲ್ ಮೂರನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಮುಂದಾದರು. ಕಾಂಗ್ರೆಸ್ ಕೂಡಾ ಹಿರಿಯ ನಾಯಕರನ್ನು ಕೈಬಿಟ್ಟು ಯುವ ಅಭ್ಯರ್ಥಿಗೆ ಪ್ರಾಶಸ್ತ್ರ ನೀಡಿತು. ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದರು. ಬಿಎಸ್‌ಪಿ, ಎಸ್‌ಡಿಪಿಐ ಸಹಿತ 13 ಅಭ್ಯರ್ಥಿಗಳು ಕಣದಲ್ಲಿದ್ದರು. ದೇಶದಲ್ಲಿ ಮತ್ತೆ ಮೋದಿ ಅಲೆ. ನಳಿನ್‌ ಕುಮಾರ್ ಕಟೀಲ್ ಅವರು 2.74 ಲಕ್ಷ ಮತಗಳ ಅಂತರದಿಂದ ಮಿಥುನ್ ರೈ ಅವರನ್ನು ಸೋಲಿಸಿ ಹ್ಯಾಟ್ರಿಕ್ ಜಯ ಸಾಧಿಸಿದರು.

1951 : ಬಿ. ಶಿವರಾವ್ (ಕಾಂಗ್ರೆಸ್) ಗೆಲುವಿನ ಅಂತರ : 8,841

1957: ಕೆ.ಆರ್. ಆಚಾರ್ (ಕಾಂಗ್ರೆಸ್) ಗೆಲುವಿನ ಅಂತರ :58226

1962 : ಎ. ಶಂಕರ ಆಳ್ವ (ಕಾಂಗ್ರೆಸ್) ಗೆಲುವಿನ ಅಂತರ : 33756

1967 : ಸಿ.ಎಂ. ಪೂಣಚ್ಚ (ಕಾಂಗ್ರೆಸ್) ಗೆಲುವಿನ ಅಂತರ : 28552

1971: ಕೆ ಕೆ ಶೆಟ್ಟಿ (ಕಾಂಗ್ರೆಸ್)‌ ಗೆಲುವಿನ ಅಂತರ : 121230

1977 : ಜನಾರ್ದನ ಪೂಜಾರಿ (ಕಾಂಗ್ರೆಸ್) ಗೆಲುವಿನ ಅಂತರ : 78328

1980 : ಜನಾರ್ದನ ಪೂಜಾರಿ (ಕಾಂಗ್ರೆಸ್) ಗೆಲುವಿನ ಅಂತರ : 128897

1984 : ಜನಾರ್ದನ ಪೂಜಾರಿ (ಕಾಂಗ್ರೆಸ್) ಗೆಲುವಿನ ಅಂತರ : 119399

1989 : ಜನಾರ್ದನ ಪೂಜಾರಿ (ಕಾಂಗ್ರೆಸ್) ಗೆಲುವಿನ ಅಂತರ : 91097

1991 : ವಿ. ಧನಂಜಯ ಕುಮಾರ್ (ಬಿಜೆಪಿ) ಗೆಲುವಿನ ಅಂತರ : 35005

1996 : ವಿ. ಧನಂಜಯ ಕುಮಾರ್ (ಬಿಜೆಪಿ) ಗೆಲುವಿನ ಅಂತರ : 14499

1998 : ವಿ. ಧನಂಜಯ ಕುಮಾರ್ (ಬಿಜೆಪಿ) ಗೆಲುವಿನ ಅಂತರ : 6907

1999 : ವಿ. ಧನಂಜಯ ಕುಮಾರ್ (ಬಿಜೆಪಿ) ಗೆಲುವಿನ ಅಂತರ : 8469

2004 : ಡಿ.ವಿ. ಸದಾನಂದ ಗೌಡ (ಬಿಜೆಪಿ) ಗೆಲುವಿನ ಅಂತರ : 33415

2009 : ನಳಿನ್‌ ಕುಮಾರ್ ಕಟೀಲ್ (ಬಿಜೆಪಿ) ಗೆಲುವಿನ ಅಂತರ : 40420

2014 : ನಳಿನ್ ಕುಮಾರ್ ಕಟೀಲ್ (ಬಿಜೆಪಿ) ಗೆಲುವಿನ ಅಂತರ : 143,704

2019: ನಳಿನ್‌ ಕುಮಾರ್‌ ಕಟೀಲ್ (ಬಿಜೆಪಿ) ಗೆಲುವಿನ ಅಂತರ : 2, 74, 621

ಸಮಗ್ರ ಫಲಿತಾಂಶ

1951
ಬಿ ಶಿವರಾವ್‌ (ಕಾಂಗ್ರೆಸ್)- 96619
ಕೆ ಆರ್‌ ಕಾರಂತ್ (‌ಕೆಎಂಪಿಪಿ)- 87778
ಆರ್.ಎಸ್. ಶರ್ಮ (ಪಕ್ಷೇತರ)-21704
ಒಟ್ಟು- 206101

1957
ಕೆ.ಆರ್. ಆಚಾರ್ (ಕಾಂಗ್ರೆಸ್)- 143599
ಕೃಷ್ಣ ಶೆಟ್ಟಿ ಎ (ಸಿಪಿಐ)-85373
ಎಂ.ಎಸ್‌ ಎ ಶರ್ಮಾ-21213
ಒಟ್ಟು-250185

1962
ಎ. ಶಂಕರ ಆಳ್ವ (ಕಾಂಗ್ರೆಸ್)- 118102
ಜೆ.ಎಂ. ಲೋಬೊ ಪ್ರಭು (ಸ್ವತಂತ್ರ)-84346
ಬಿ.ವಿ. ಕಕ್ಕಿಲಾಯ (ಸಿಪಿಐ)- 59656
ಎಂ. ಗೋವಿಂದ ರಾವ್ (ಜನಸಂಘ)-17974
ಒಟ್ಟು-280078

1967
ಸಿ.ಎಂ. ಪೂಣಚ್ಚ (ಕಾಂಗ್ರೆಸ್)-125162
ಕೆ.ಆರ್. ಕಾರಂತ್ (ಪಕ್ಷೇತರ)-96640
ಬಿ.ಎನ್. ಕುಟ್ಟಪ್ಪ (ಸಿಪಿಎಂ)-57776
ಟಿ.ಟಿ. ಮಲ್ಲಿ (ಪಕ್ಷೇತರ)-15076
ಯು.ಎಲ್. ಕಿಣಿ (ಪಕ್ಷೇತರ)- 10102
ಒಟ್ಟು-304756

1971
ಕೆ.ಕೆ. ಶೆಟ್ಟಿ (ಕಾಂಗ್ರೆಸ್)-205516
ಸಿ.ಎಂ. ಪೂಣಚ್ಚ (ಎನ್‌ಸಿಒ)-84286
ಎಂ.ಎಚ್. ಕೃಷ್ಣಪ್ಪ (ಸಿಪಿಎಂ)-22670
ಎಸ್.ಎನ್. ವಾಸುದೇವ ರಾವ್ (ಪಕ್ಷೇತರ)-2991
ಈಶ್ವರ ಭಟ್ ಪಾರ್ಪಕಜೆ (ಪಿಎಸ್‌ಪಿ)-2717
ಒಟ್ಟು-318180

1977
ಜನಾರ್ದನ ಪೂಜಾರಿ (ಕಾಂಗ್ರೆಸ್)-233458
ಎ.ಕೆ. ಸುಬ್ಬಯ್ಯ (ಜನತಾ ಪಾರ್ಟಿ)-155130
ಒಟ್ಟು-388588

1980
ಜನಾರ್ದನ ಪೂಜಾರಿ (ಕಾಂಗ್ರೆಸ್)-249283
ಕರಂಬಳ್ಳಿ ಸಂಜೀವ ಶೆಟ್ಟಿ (ಜೆಎನ್‌ಪಿ)- 120386
ಬಿ.ಎ. ಮೊಯಿದ್ದೀನ್ (ಕಾಂಗ್ರೆಸ್ ಯು)-36628
ಮಹಾಬಲೇಶ್ವರ ಭಟ್ (ಸಿಪಿಎಂ)-23619
ಐ.ಎಂ. ಕಾರಿಯಪ್ಪ (ಪಕ್ಷೇತರ)-8695
ದಳವಾಯಿ ಹನುಮರಾಜೇ ಅರಸ್ (ಪಕ್ಷೇತರ)-3651
ಕೊಕ್ಕಂಡ ಬೆಳಿಯಪ್ಪ ಚಂಗಪ್ಪ (ಪಕ್ಷೇತರ)-1660
ಎಸ್.ಎನ್. ವಾಸುದೇವ ರಾವ್ (ಪಕ್ಷೇತರ)- 1179
ಶಂಕರನಾರಾಯಣ ಭಟ್ ನೆಟ್ಟಾರ್ (ಪಕ್ಷೇತರ)-580
ಒಟ್ಟು-445681

1984
ಜನಾರ್ದನ ಪೂಜಾರಿ (ಕಾಂಗ್ರೆಸ್)-299490
ಕೆ. ರಾಮ ಭಟ್ (ಬಿಜೆಪಿ)-180091
ಏಕನಾಥ ನಾಯಕ್ (ಪಕ್ಷೇತರ)-3219
ಒಟ್ಟು-482800

1989
ಜನಾರ್ದನ ಪೂಜಾರಿ (ಕಾಂಗ್ರೆಸ್)-275672
ವಿ. ಧನಂಜಯಕುಮಾರ್ (ಬಿಜೆಪಿ)-184575
ಎಂ. ಮಹಮ್ಮದ್ ಹುಸೇನ್ (ಜನತಾ ದಳ)-133533
ಪಿ.ಡಿ. ಸುಬ್ಬಯ್ಯ (ಜನತಾ ಪಾರ್ಟಿ)-20182
ಪಿ.ವಿ. ಮೋಹನ್ (ಪಕ್ಷೇತರ)-4104
ಗರ್ಟಿ ಸುವರ್ಣ (ಪಕ್ಷೇತರ)-2277
ಪ್ರೊಸಿ ವಿ. ಪಿರೇರಾ (ಪಕ್ಷೇತರ)-1592
ಮೆಲ್‌ವಿಲ್ ಪಿಂಟೊ (ಪಕ್ಷೇತರ)-1560
ಪಿ. ವಾಸುದೇವ (ಪಕ್ಷೇತರ)-1471
ಒಟ್ಟು-624966

1991
ವಿ. ಧನಂಜಯಕುಮಾರ್ (ಬಿಜೆಪಿ)-274700
ಜನಾರ್ದನ ಪೂಜಾರಿ (ಕಾಂಗ್ರೆಸ್)-239695
ಪಿ. ರಾಮಚಂದ್ರ ರಾವ್ (ಸಿಪಿಎಂ)-28010
ಎಚ್. ಸುಬ್ಬಯ್ಯ ಶೆಟ್ಟಿ (ಜನತಾ ಪಾರ್ಟಿ)-3753
ಸಿ.ಬಿ. ಬೆಳಿಯಪ್ಪ (ಪಕ್ಷೇತರ)-2184
ಮೆಲ್‌ವಿಲ್ ಪಿಂಟೊ (ಪಕ್ಷೇತರ)-2045
ಬಿ.ಇ. ಶೇಷಾದ್ರಿ (ಪಕ್ಷೇತರ)-567
ಎಂ.ಎನ್. ಗೋವಿಂದರಾಜು (ಪಕ್ಷೇತರ)-522
ಒಟ್ಟು-551476

1996
ವಿ. ಧನಂಜಯಕುಮಾರ್ (ಬಿಜೆಪಿ)-250765
ಜನಾರ್ದನ ಪೂಜಾರಿ (ಕಾಂಗ್ರೆಸ್)-236266
ಬಿ ಎ ಜೀವಿಜಯ(ಜೆಡಿಎಸ್)-180889
ಎವರೆಸ್ಟ್ ಡಿಸೋಜಾ (ಪಕ್ಷೇತರ)-4318
ಪಿ ವಿ ವಿಜಯಕುಮಾರ್‌ (ಪಕ್ಷೇತರ)-2218
ಪಿ.ಎಂ. ಬೋಜಪ್ಪ (ಪಕ್ಷೇತರ)-1841
ಕಾಳಚಂಡ ರವಿ ತಮ್ಮಯ್ಯ (ಪಕ್ಷೇತರ)-1834
ವಾಸುದೇವ ಎಂ.ಪಿ. (ಪಕ್ಷೇತರ)-1517
ಕೊಕ್ಕಂಡ ಬೆಳ್ಳಿಯಪ್ಪ ಚಂಗಪ್ಪ (ಪಕ್ಷೇತರ)-1043
ಹರೀಶ್ ಬಂಟ್ವಾಳ್ (ಪಕ್ಷೇತರ)-961
ಮೋಹನ್ ದೇವ್ ಆಳ್ವ (ಪಕ್ಷೇತರ)-861
ಪಿ.ಎ. ಅಬ್ಬಾಸ್ (ಪಕ್ಷೇತರ)-441
ಒಟ್ಟು- 682954

1998
ವಿ. ಧನಂಜಯಕುಮಾರ್ (ಬಿಜೆಪಿ)-341362
ಜನಾರ್ದನ ಪೂಜಾರಿ (ಕಾಂಗ್ರೆಸ್)-334455
ಮಾತಂಡ ರಮೇಶ್ (ಜನತಾದಳ)-28190
ಜೆ. ರಾಮದಾಸ್ (ಕೆವಿಪಿ)-2952
ಬಿ. ಇಸ್ಮಾಯಿಲ್ (ಪಿಡಿಪಿ)-1056
ನಿಟ್ಟೆ ವಿದ್ಯಾದರ ಶೆಟ್ಟಿ (ಪಕ್ಷೇತರ)-882
ಒಟ್ಟು-708897

1999
ವಿ. ಧನಂಜಯ ಕುಮಾರ್ (ಬಿಜೆಪಿ)-353536
ಎಂ. ವೀರಪ್ಪ ಮೈಲಿ (ಕಾಂಗ್ರೆಸ್)-345067
ಲೋಕೇಶ್ವರಿ ವಿನಯಚಂದ್ರ (ಜೆಡಿಎಸ್)-20980
ಒಟ್ಟು-719583

2004
ಡಿ.ವಿ. ಸದಾನಂದ ಗೌಡ (ಬಿಜೆಪಿ)-384760
ಎಂ. ವೀರಪ್ಪ ಮೈಲಿ (ಕಾಂಗ್ರೆಸ್)-351345
ಎ.ಕೆ. ಸುಬ್ಬಯ್ಯ (ಜೆಡಿಎಸ್)-39774
ರೋಹಿತ್ ಕುಮಾರ್ ಜೋಷಿ (ಕನ್ನಡನಾಡು)-15693
ಒಟ್ಟು-791572

2009
ನಳಿನ್‌ ಕುಮಾ‌ರ್ ಕಟೀಲ್ (ಬಿಜೆಪಿ)-499385
ಜನಾರ್ದನ ಪೂಜಾರಿ (ಕಾಂಗ್ರೆಸ್)-458965
ಬಿ ಮಾಧವ (ಸಿಪಿಐಎಂ)-18328
ಅಲೆಕ್ಕಾಡಿ ಗಿರೀಶ್ ರೈ (ಬಿಎಸ್‌ಪಿ)-10196
ಸುಬ್ರಹ್ಮಣ್ಯ ಕುಮಾರ ಕುಂಟಿಕಾನ (ಪಕ್ಷೇತರ)-8932
ಬಿ. ರಾಮ ಭಟ್ (ಪಕ್ಷೇತರ)-5960
ಡಾ. ಯು.ಪಿ. ಶಿವಾನಂದ (ಪಕ್ಷೇತರ)-4825
ವಾಸುದೇವ ಗೌಡ ಎಂ.ಪಿ. (ಪಕ್ಷೇತರ)-3180
ಆನಂದ ಗಟ್ಟಿ (ಪಕ್ಷೇತರ)-2373
ಮಹಮ್ಮದ್ ಸಾಲಿ (ಪಕ್ಷೇತರ)-1977
ಡಾ. ತಿರುಮಲರಾಯ (ಪಕ್ಷೇತರ)-1801
ಒಟ್ಟು-1015922

2014
ನಳಿನ್ ಕುಮಾರ್ ಕಟೀಲು (ಬಿಜೆಪಿ)-642739
ಜನಾರ್ದನ ಪೂಜಾರಿ (ಕಾಂಗ್ರೆಸ್)-499030
ಹನೀಫ್ ಖಾನ್ ಕೊಡಾಜೆ (ಎಸ್‌ಡಿಪಿಐ)-27254
ಕೆ. ಯಾದವ ಶೆಟ್ಟಿ (ಸಿಪಿಐಎಂ)-9394
ಎಂ.ಆರ್. ವಾಸುದೇವ (ಎಎಪಿ)-5442
ಅಬ್ದುಲ್ ಕುಂಞ (ಬಿಎಸ್‌ಪಿ)-4471
ಕೆ.ಎನ್. ಸೋಮಶೇಖರ್ (ಪಕ್ಷೇತರ)-3421
ಸುಬ್ರಹ್ಮಣ್ಯಗೌಡ ಕೆ. (ಪಕ್ಷೇತರ)-2450
ಸುದತ್ತ ಜೈನ್ ಶಿರ್ತಾಡಿ (ಪಕ್ಷೇತರ)-1613
ಅಡ್ವಕೇಟ್ ಆನಂದ ಗಟ್ಟಿ (ಪಕ್ಷೇತರ)-1116
ಮೆಕ್ಸಿಂ ಪಿಂಟೋ (ಪಕ್ಷೇತರ)-1072
ದೀಪಕ್ ರಾಜೇಶ್ ಕುವೆಲ್ಲೊ (ಪಕ್ಷೇತರ)-905
ಕೆ. ಕುಶಲ ಬೆಳ್ಳಾರೆ (ಪಕ್ಷೇತರ)-801
ಸುಪ್ರೀತ್ ಕುಮಾರ್ ಪೂಜಾರಿ (ಎಚ್‌ಜೆಪಿ)-657
ನೋಟಾ-7109
ಒಟ್ಟು-1207583

2019
ನಳಿನ್ ಕುಮಾರ್ ಕಟೀಲ್ (ಬಿಜೆಪಿ)-774285
ಮಿಥುನ್ ಎಂ. ರೈ (ಕಾಂಗ್ರೆಸ್)-449664
ಮಹಮ್ಮದ್ ಎಲಿಯಾಸ್ (ಎಸ್‌ಡಿಪಿಐ)-46839
ಎಸ್. ಸತೀಶ್ ಸಾಲ್ಯಾನ್ (ಬಿಎಸ್‌ಪಿ)-4713
ಅಲೆಕ್ಸಾಂಡರ್ (ಪಕ್ಷೇತರ)-2752
ಎಚ್. ಸುರೇಶ್ ಪೂಜಾರಿ (ಪಕ್ಷೇತರ)-2315
ವೆಂಕಟೇಶ್ ಬೆಂಡೆ (ಪಕ್ಷೇತರ)-1702
ವಿಜಯ್‌ ಶ್ರೀನಿವಾಸ್‌ (ಯುಪಿಜೆಪಿ)-1629
ಸುಪ್ರೀತ್ ಕುಮಾರ್ ಪೂಜಾರಿ (ಎಚ್‌ಜೆಪಿ)-948
ಮ್ಯಾಕ್ಸಿಂ ಪಿಂಟೊ (ಪಕ್ಷೇತರ)-908
ದೀಪಕ್ ರಾಜೇಶ್ ಕೊಯೆಲ್ಲೊ (ಪಕ್ಷೇತರ)-748
ಮಹಮ್ಮದ್ ಖಾಲಿದ್ (ಪಕ್ಷೇತರ)-602
ಅಬ್ದುಲ್ ಹಮೀದ್ (ಪಕ್ಷೇತರ)-554
ನೋಟಾ-7380
ಒಟ್ಟು-13.45,039

ಕೃಪೆ-ಪಿ ಬಿ ಹರೀಶ್‌ ರೈ

LEAVE A REPLY

Please enter your comment!
Please enter your name here