ವಿವಾಹ ವಿಚ್ಚೇದನದಲ್ಲಿ ಕರ್ನಾಟಕ ಭಾರತದಲ್ಲಿ ಎರಡನೇ ಸ್ಥಾನದಲ್ಲಿದೆ ಎಂದು ವರದಿಯೊಂದು ತಿಳಿಸಿದೆ. ಮಹಾರಾಷ್ಟ್ರದಲ್ಲಿ ಶೇಕಡ 18.7 ರಷ್ಟು ವಿವಾಹ ವಿಚ್ಚೇದನಗಳಾಗುತ್ತಿದ್ದು, ದೇಶದಲ್ಲಿ ಮೊದಲ ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿರುವ ಕರ್ನಾಟಕದಲ್ಲಿ ಶೇಕಡ 11.7 ರಷ್ಟು ವಿವಾಹ ವಿಚ್ಚೇದನಗಳಾಗುತ್ತವೆ ಎಂದು ವರದಿ ಹೇಳಿದೆ.
ಮೂರನೇ ಸ್ಥಾನದಲ್ಲಿರುವ ಉತ್ತರ ಪ್ರದೇಶದಲ್ಲಿ ಶೇಕಡ 8.8, ಪಶ್ಚಿಮ ಬಂಗಾಲದಲ್ಲಿ 8.2, ದೆಹಲಿಯಲ್ಲಿ 7.7, ತಮಿಳುನಾಡಿನಲ್ಲಿ 7.1, ತೆಲಂಗಾಣದಲ್ಲಿ 6.7, ಕೇರಳದಲ್ಲಿ 6.3 ಶೇಕಡದಷ್ಟು ವಿವಾಹ ವಿಚ್ಚೇದನಗಳಾಗುತ್ತಿವೆ ಎಂದು ವರದಿ ಹೇಳಿದೆ. ಸಣ್ಣ ಪುಟ್ಟ ಭಿನ್ನಾಭಿಪ್ರಾಯಕ್ಕೆ ವಿಚ್ಚೇದನಗಳಾಗುತ್ತಿವೆ ಎಂದು ವರದಿಯಲ್ಲಿ ಹೇಳಲಾಗಿದ್ದು, ಅವಿದ್ಯಾವಂತರಿಗಿಂತ ವಿದ್ಯಾವಂತರೆ ಹೆಚ್ಚು ವಿಚ್ಚೇದನ ಪಡೆಯುತ್ತಿರುವುದು ಕಳವಳಕ್ಕೆ ಕಾರಣವಾಗಿದೆ.