ರಸ್ತೆ ಅಪಘಾತ – ಬೋನೆಟ್ ಮೇಲೆ ಸಿಲುಕಿಕೊಂಡ ಒಂಟೆ

ಮಂಗಳೂರು (ರಾಜಸ್ಥಾನ): ರಾತ್ರಿ ವೇಳೆ ನಡೆದ ರಸ್ತೆ ಅಪಘಾತದಲ್ಲಿ ಒಂಟೆಯೊಂದು ಕಾರಿನ ಬೋನೆಟ್ ಮೇಲೆ ಸಿಲುಕಿಕೊಂಡು ಗಂಭೀರ ಗಾಯಗೊಂಡು ಕಿರುಚಾಡಿದ ಘಟನೆ ರಾಜಸ್ಥಾನದ ಹನುಮಾನ್‌ಗಢ ಪ್ರದೇಶದಲ್ಲಿ ನಡೆದಿದೆ.

ರಾತ್ರಿ ಕಾರೊಂದು ಹೆದ್ದಾರಿಯಲ್ಲಿ ವೇಗವಾಗಿ ಹೋಗುತ್ತಿರುವಾಗ ಒಂಟೆ ರಸ್ತೆಗೆ ಅಡ್ಡ ಬಂದಿದೆ. ವೇಗದಲ್ಲಿದ್ದ ಕಾರನ್ನು ನಿಲ್ಲಿಸಲಾಗದೇ ಒಂಟೆಗೆ ಡಿಕ್ಕಿ ಹೊಡೆದಿದ ಪರಿಣಾಮ ಕಾರಿನ ಬಾನೆಟ್ ಮೇಲೆ ಒಂಟೆ ಸಿಲುಕಿಕೊಂಡಿದೆ. ಘಟನೆಯಲ್ಲಿ ಕಾರಿನಲ್ಲಿದ್ದ ಪ್ರಯಾಣಿಕರೆಲ್ಲ ಸುರಕ್ಷಿವಾಗಿದ್ದು ಸಣ್ಣಪುಟ್ಟ ಗಾಯಗಳಾಗಿದೆ. ಒಂಟೆ ಮೇಲೆ ಕುಳಿತ್ತಿದ್ದರಿಂದ ಕಾರಿನ ಗ್ಲಾಸ್​ಗಳು ಸೇರಿದಂತೆ ಕಾರಿನ ಮೇಲ್ಭಾಗವೆಲ್ಲ ಅಪ್ಪಚ್ಚಿಯಾಗಿರುವುದು ವಿಡಿಯೋದಲ್ಲಿ ಕಾಣಬಹುದು.

ಘಟನೆಯಿಂದ ಒಂಟೆ ತೀವ್ರವಾಗಿ ಗಾಯಗೊಂಡಿದ್ದು ಕಾರಿನ ಬಾನೆಟ್ ಮೇಲೆ ಇರುವಾಗ ಒಂಟೆ ನೋವಿನಿಂದ ಕಿರುಚಿಕೊಳ್ಳಲು ಪ್ರಾರಂಭಿಸಿತ್ತು. ಮೇಲೆಕ್ಕೆ ಎದ್ದು ಬರಲಾಗದೇ ನೋವಿನಿಂದ ಕೂಗುತ್ತಿತ್ತು. ಬಳಿಕ ಸ್ಥಳೀಯರ ಸಹಾಯದಿಂದ ಕಾರಿನ ಮೇಲಿನಿಂದ ಒಂಟೆಯನ್ನು ಹೊರ ತೆಗೆಯಲಾಗಿದ್ದು, ಒಂಟೆಗೆ ಗಾಯಗಳಾಗಿದೆ ಎಂದು ತಿಳಿದುಬಂದಿದೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here