ವಿಜ್ಞಾನಕ್ಕೆ ಸೆಡ್ಡು ಹೊಡೆಯುವ ವಿಸ್ಮಯಗಳ‌ ತಾಣ – ಪುರಿ ಜಗನ್ನಾಥನ ಸನ್ನಿಧಿ – ಇಲ್ಲಿದೆ ವಿವರ

ಮಂಗಳೂರು(ಪುರಿ): ಪುರಿ ಜಗನ್ನಾಥ.. ಬಂಗಾಳ ಕೊಲ್ಲಿಯ ಕಡಲತಡಿಯಲ್ಲಿ ನೆಲೆನಿಂತ ಜಗದೋದ್ಧಾರಕ.. ಪವಿತ್ರ ಧಾರ್ಮಿಕ ಕೇಂದ್ರಗಳಲ್ಲಿ ಒಂದಾದ ಮಹೋದಧಿಯ ನೆಲ. ಪುರಿ ಜಗನ್ನಾಥ ದೇವಾಲಯ ಅಚ್ಚರಿಗಳ ಆಗರ. ವಿಜ್ಞಾನಕ್ಕೆ ಸೆಡ್ಡು ಹೊಡೆಯುವ ವಿಸ್ಮಯಗಳ‌ ತಾಣ. ಪುರಿ ಜಗನ್ನಾಥ್ ದೇವಸ್ಥಾನ ದೇಶದ ಪ್ರಮುಖ ಚಾರ್ ಧಾಮ್​​ಗಳಲ್ಲಿ ಒಂದು. ದೇವಾಲಯದ ವಿಶೇಷತೆಯ ಬಗೆಗಿನ ವಿವರ ಇಲ್ಲಿದೆ.

  •  ಈ ದೇವಾಲಯದ ಮೇಲೆ ಪುರಾತನ ಕಾಲದಿಂದಲೂ ಧ್ವಜ ಹಾರಾಡುತ್ತಿದೆ. ಈ ಧ್ವಜವು ಗಾಳಿಯ ವಿರುದ್ಧ ದಿಕ್ಕಿಗೆ ಹಾರುತ್ತದೆ ಎನ್ನುವುದು ಇಲ್ಲಿನ ವಿಶೇಷ. ವೈಜ್ಞಾನಿಕವಾಗಿ ಸವಾಲನ್ನು ಒಡ್ಡುವ ಈ ಸಂಗತಿಯು, ವಿಜ್ಞಾನಕ್ಕೂ ಮಿಗಿಲಾದ ದೈವ ಶಕ್ತಿಗೆ ಸಾಕ್ಷಿಯಾಗಿದೆ.
  • ದೇವಸ್ಥಾನದ ಮೇಲಿರುವ ಸುದರ್ಶನ ಚಕ್ರವು 20 ಅಡಿ ಎತ್ತರ ಮತ್ತು ಒಂದು ಟನ್ ತೂಕವನ್ನು ಹೊಂದಿದೆ. ಇದನ್ನು ದೇವಾಲಯದ ಮೇಲ್ಭಾಗದಲ್ಲಿ ಅಳವಡಿಸಲಾಗಿದೆ. ಈ ಚಕ್ರದ ವಿಶೇಷ ಏನೆಂದರೆ ಪುರಿ ನಗರದ ಯಾವುದೇ ಭಾಗದಲ್ಲಿ ನಿಂತು ನೋಡಿದರೂ ಚಕ್ರ ಕಾಣುತ್ತದೆ. ಜೊತೆಗೆ ಎಲ್ಲಿ ನಿಂತು ನೋಡಿದರೂ ಅದರ ಮುಖ ನಿಮ್ಮೆಡೆಗೆ ಇರುವಂತೆ ತೋರುತ್ತದೆ.

  • ವಿಶಿಷ್ಟ ರಚನೆ ಹಾಗೂ ಶಕ್ತಿಯನ್ನು ಹೊಂದಿರುವ ಸುದರ್ಶನ ಚಕ್ರದ ಮೇಲೆ ಯಾವುದೇ ಪಕ್ಷಿಗಳು, ಕೀಟಗಳು ಹಾಗೂ ವಿಮಾನಗಳು ಹಾರುವುದಿಲ್ಲ. ಇದರಿಂದಾಗಿ ಚಕ್ರಕ್ಕೆ ದೈವ ಶಕ್ತಿಯ ಪ್ರಭಾವ ಇದೆ ಎಂದು ನಂಬಲಾಗಿದೆ. ಈ ನಿಗೂಢ ವಿದ್ಯಮಾನಗಳಿಗೆ ಕಾರಣ ಏನು ಎನ್ನುವುದನ್ನು ಇದುವರೆಗೂ ಕಂಡುಹಿಡಿಯಲಾಗಿಲ್ಲ.

  • ಪುರಿ ದೇವಾಲಯದ ಇನ್ನೊಂದು ವಿಶೇಷ ಎಂದರೆ ಇಲ್ಲಿ ನೆರಳು ಬೀಳದೆ ಇರುವುದು. ದೇವಾಲಯದ ಒಳಗೆ ಮತ್ತು ಹೊರಗೆ ಯಾವುದೇ ಸಮಯದಲ್ಲಿ ನೆರಳು ಬೀಳುವುದಿಲ್ಲ. ಇದು ಪ್ರಕೃತಿಯ ಪವಾಡ ಮತ್ತು ದೈವ ಶಕ್ತಿ ಎಂಬ ನಂಬಿಕೆ ಇದೆ.
  • ಈ ದೇವಾಲಯದಲ್ಲಿ ಪ್ರತಿದಿನ ಅರ್ಚಕರು ಸುಮಾರು 1000 ಅಡಿ ಎತ್ತರದಲ್ಲಿರುವ ಗೋಪುರಗಳನ್ನು ಹತ್ತಿ, ಬಾವುಟಗಳನ್ನು ಬದಲಿಸುತ್ತಾರೆ. ಈ ಆಚರಣೆಯು 1800 ವರ್ಷಗಳಿಂದಲೂ ನಡೆದುಕೊಂಡು ಬರುತ್ತಿದೆ. ಈ ಆಚರಣೆಯು ಅನಿರೀಕ್ಷಿತವಾಗಿ ತಪ್ಪಿದರೆ ಮುಂದಿನ 18 ವರ್ಷಗಳ ಕಾಲ ದೇವಾಲಯ ಮುಚ್ಚಲ್ಪಡುತ್ತದೆ ಎಂಬ ನಂಬಿಕೆ ಇದೆ.

LEAVE A REPLY

Please enter your comment!
Please enter your name here