ಫೋನ್ ಪೇ, ಗೂಗಲ್‌ ಪೇ ನಲ್ಲಿ ತಪ್ಪಾಗಿ ಹಣ ವರ್ಗಾವಣೆಯಾದರೆ ?……..ಹಣ ಮರಳಿ ಪಡೆಯಲು ಇಲ್ಲಿದೆ ಟಿಪ್ಸ್‌

ಮಂಗಳೂರು: ಫೋನ್ ಪೇ, ಗೂಗಲ್‌ ಪೇ ಅಥವಾ ಬೇರೆ ಯಾವುದೇ ಪೇಮೆಂಟ್ ಆಪ್‌ನಲ್ಲಿ ಹಣವನ್ನು ಕಳುಹಿಸುವಾಗ ತಪ್ಪಾಗಿ ಹಣ ವರ್ಗಾವಣೆಯಾದರೆ ಏನು ಮಾಡಬೇಕು..? ಈ ಹಣ ಮರಳಿ ಪಡೆಯುವುದಾದರೂ ಹೇಗೆ? ಇಲ್ಲಿದೆ ಟಿಪ್ಸ್.

  • ಇಂತಹ ಡಿಜಿಟಲ್ ಪಾವತಿಗಳು ಯೂನಿಫೈಡ್‌ ಪೇಮೆಂಟ್ಸ್ ಇಂಟರ್‌ಫೇಸ್(ಯುಪಿಐ) ಎಂದು ಹೇಳುತ್ತಾರೆ. ಡಿಜಿಟಲ್ ಪಾವತಿ ಮಾಡುವ ವಿಧಾನದ ಮೂಲಕ ಜನರು ಸುಲಭವಾಗಿ ಯುಪಿಐ ಮೂಲಕ ಯಾರಿಗೆ ಬೇಕಾದರೂ ಹಣವನ್ನು ಕಳುಹಿಸಬಹುದು ಯಾ ಸ್ವೀಕರಿಸಬಹುದು.
  • ಇಂತಹ ವ್ಯವಹಾರಗಳು ಮಾಡುವಾದ ಸಣ್ಣ ತಪ್ಪುಗಳಿಂದಾಗಿ ತಪ್ಪಾದ ಯುಪಿಐ ಐಡಿಯಲ್ಲಿ ಪಾವತಿ ಮಾಡಿಬಿಡುತ್ತೇವೆ. ಅಂತಹ ಪರಿಸ್ಥಿತಿಯಲ್ಲಿ ಏನು ಮಾಡಬೇಕು ಎಂಬುದು ಹೆಚ್ಚಿನವರಿಗೆ ಗೊತ್ತಾಗುವುದಿಲ್ಲ. ತಪ್ಪಾದ ಪಾವತಿಯನ್ನು ಮರಳಿ ಪಡೆಯಲು ಈ ಕೆಳಗಿನ ಸುಲಭ ಮಾರ್ಗಗಳನ್ನು ಅನುಸರಿಸಬೇಕು.
  • ಯುಪಿಐ(UPI) ಅಪ್ಲಿಕೇಶನ್ ಕಸ್ಟಮರ್ ಕೇರ್‌ ಜೊತೆಗೆ ಮಾತನಾಡಿ
  • ಭಾರತೀಯ ರಿಸರ್ವ್‌ ಬ್ಯಾಂಕ್‌ ಮಾರ್ಗಸೂಚಿ ಪ್ರಕಾರ, ಬಳಕೆದಾರರು ತಕ್ಷಣ ಈ ಸಮಸ್ಯೆಯನ್ನು ಪೇಮೆಂಟ್ ಸರ್ವಿಸ್ ಪ್ರೊವೈಡರ್ ಯಾ ಪಾವತಿ ಸೇವಾ ಪೂರೈಕೆದಾರರಿಗೆ ವರದಿ ಮಾಡಬೇಕು.
  • ಯುಪಿಐ ನಲ್ಲಿ ತಪ್ಪಾಗಿ ಬೇರೆಯವರ ಖಾತೆಗೆ ಹಣ ಹಾಕಿದ ಬಗ್ಗೆ ವಿವರ ನೀಡಬೇಕು.
  • ಗೂಗಲ್ ಪೇ, ಫೋನ್ ಪೇ, ಪೇಟಿಎಂ ಅಥವಾ ಯಾವುದೇ ಯುಪಿಐ ಅಪ್ಲಿಕೇಶನ್ ಕಸ್ಟಮರ್ ಕೇರ್‌ಗೆ ಕರೆ ಮಾಡುವ ಮೂಲಕ ನೀವು ಈ ವಿಷಯವನ್ನು ತಿಳಿಸಬಹುದು. ನಿಮ್ಮ ಸಮಸ್ಯೆಯನ್ನು ಹೇಳಿಕೊಂಡು ಮರುಪಾವತಿ ಮಾಡುವಂತೆ ಕೋರಬಹುದು.
  • ಗೂಗಲ್ ಪೇ, ಫೋನ್ ಪೇ, ಪೇಟಿಎಂ ಅಥವಾ ಯಾವುದೇ ಯುಪಿಐ ಅಪ್ಲಿಕೇಶನ್ ಕಸ್ಟಮರ್ ಕೇರ್‌ಗೆ ಕರೆ ಮಾಡಿದರೂ ನಿಮ್ಮ ಸಮಸ್ಯೆ ಬಗೆಹರಿಯದಿದ್ದರೆ ನೀವು NPCI ಪೋರ್ಟಲ್‌ನಲ್ಲಿ ದೂರು ನೀಡಬಹುದು.
  • ಇದಕ್ಕೆ ನೀವು ಈ ಕೆಳಗೆ ನೀಡಲಾದ ಹಂತಗಳನ್ನು ಅನುಸರಿಸಬಹುದು
  •  NPCIನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
  • ನಂತರ What we do ಹೆಸರಿಗೆ ಟ್ಯಾಬ್ ಕ್ಲಿಕ್ ಮಾಡಿ
  •  ಇದಾದ ಬಳಿಕ UPI ಮೇಲೆ ಟ್ಯಾಪ್ ಮಾಡಿ
  • ನಂತರ Dispute Redressal Mechanism ಆಯ್ಕೆ ಮಾಡಿ
  • ದೂರು ವಿಭಾಗದ ಅಡಿಯಲ್ಲಿ ಯುಪಿಐ ವಹಿವಾಟು ಐಡಿ, ವರ್ಚುವಲ್ ಪಾವತಿ ವಿಳಾಸ, ವರ್ಗಾವಣೆಯಾದ ಮೊತ್ತ, ವಹಿವಾಟಿನ ದಿನಾಂಕ, ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಒಳಗೊಂಡಿರುವ ವಹಿವಾಟಿನ ವಿವರಗಳನ್ನು ನಮೂದಿಸಿ.
  • ಇಲ್ಲಿ ಇನ್ನೊಂದು ಖಾತೆಗೆ ತಪ್ಪಾಗಿ ವರ್ಗಾಯಿಸಲಾಗಿದೆ ಎಂಬ ಕಾರಣ ಆಯ್ಕೆ ಮಾಡಿ
  • ಕೊನೆಯಲ್ಲಿ ದೂರನ್ನು ಸಲ್ಲಿಸಿ ಕ್ಲಿಕ್ ಮಾಡಿ
  • ಬ್ಯಾಂಕ್‌ನ್ನು ಸಂಪರ್ಕಿಸಿ
  • ದೂರು ನೀಡಿದ ನಂತರವೂ ಯಾವುದೇ ಪರಿಹಾರ ಸಿಕ್ಕಿಲ್ಲ ಎಂದಾದರೆ ನೀವು ಪಾವತಿ ಸೇವಾ ಪೂರೈಕೆದಾರರ ಬ್ಯಾಂಕ್ ಅಥವಾ ಹಣವನ್ನು ಕಳುಹಿಸಿರುವ ಖ್ಯಾತೆಯ ಬ್ಯಾಂಕ್‌ಗೆ ನಿಮ್ಮ ದೂರನ್ನು ದಾಖಲಿಸಬಹುದು. ಈ ದೂರನ್ನು PSP/TPAP ಅಪ್ಲಿಕೇಶನ್‌ನಲ್ಲಿ ದಾಖಲಿಸಬಹುದು.
  • ಓಂಬುಡ್ಸ್‌ಮನ್‌ಗೆ ದೂರು ನೀಡಿ
  • ಮೇಲಿನ ವಿಧಾನಗಳನ್ನು ಅನುಸರಿಸಿದ ನಂತರವೂ ದೂರಿಗೆ ಯಾವುದೇ ಪರಿಹಾರ ಸಿಗದಿದ್ದರೆ, 30 ದಿನಗಳ ನಂತರ ನೀವು ಡಿಜಿಟಲ್ ದೂರಿಗಾಗಿ ಬ್ಯಾಂಕಿಂಗ್ ಓಂಬುಡ್ಸ್‌ಮನ್‌ರನ್ನು ಸಂಪರ್ಕಿಸಬಹುದು.
  • ಆರ್‌ಬಿಐ ಪ್ರಕಾರ ಯಾರು ಬೇಕಾದರೂ ಲೋಕಪಾಲ್‌ಗೆ ದೂರು ಸಲ್ಲಿಸಬಹುದು. ನಿಮ್ಮ ದೂರನ್ನು ಕಾಗದದಲ್ಲಿ ಬರೆದು ಅದನ್ನು ಪೋಸ್ಟ್ ಯಾ ಫ್ಯಾಕ್ಸ್‌ ಮೂಲಕ ಕಚೇರಿಗೆ ಕಳುಹಿಸಬಹುದು.

LEAVE A REPLY

Please enter your comment!
Please enter your name here