ಅಂದು ಭಾರತೀಯ ಬ್ಯಾಸ್ಕೆಟ್ ಬಾಲ್​ ದಿಗ್ಗಜ ಆಟಗಾರ – ಇಂದು ಸ್ವಾಮಿ ಸತ್ಯಾನಂದ ಸರಸ್ವತಿ  

ಮಂಗಳೂರು/ತಮಿಳುನಾಡು: ಮಾಜಿ ಒಲಿಂಪಿಯನ್​ ಮತ್ತು ಭಾರತೀಯ ಬ್ಯಾಸ್ಕೆಟ್ ಬಾಲ್​​ ದಿಗ್ಗಜ ಅಮರನಾಥ್​ ನಾಗರಾಜನ್​​ ಆಧ್ಯಾತ್ಮಿಕದ ಕಡೆಗೆ ವಾಲಿದ್ದು ಸ್ವಾಮಿ ಸತ್ಯಾನಂದ ಸರಸ್ವತಿಯಾಗಿದ್ದಾರೆ. ಒಂದೊಮ್ಮೆ ಕ್ರೀಡೆಯಲ್ಲಿ ಗುರುತಿಸಿಕೊಂಡಿದ್ದ ಇವರು ಈಗ ಸನ್ಯಾಸಿ ಜೀವನಕ್ಕೆ ತಮ್ಮ ಜೀವನವನ್ನು ಅರ್ಪಿಸಿದ್ದಾರೆ.

ಪ್ರತಿಭಾವಂತ ಕ್ರೀಡಾಪಡುವಾಗಿದ್ದ ಅಮರನಾಥ್​ ನಾಗರಾಜನ್​​ ಹಾಕಿ ಮತ್ತು ಅಥ್ಲೆಟಿಕ್ಸ್​ ಎರಡರಲ್ಲೂ ಮಿಂಚಿದ್ದರು. ಬಳಿಕ ಬ್ಯಾಸ್ಕೆಟ್ ಬಾಲ್‌​​ನಲ್ಲಿ ಖ್ಯಾತಿ ಗಳಿಸಿದ್ದರು. 1980ರಲ್ಲಿ ಮಾಸ್ಕೋದಲ್ಲಿ ನಡೆದ ಒಲಿಪಿಂಕ್ಸ್​ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಸ್ಟೇಟ್​​ ಬ್ಯಾಂಕ್​ ಆಫ್​ ಇಂಡಿಯಾ ಉದ್ಯೋಗಿಯಾಗಿದ್ದು ಅಸಿಸ್ಟೆಂಟ್​​ ಜನರಲ್​ ಮ್ಯಾನೇಜರ್​​ ಆಗಿ ನಿವೃತ್ತಿ ಹೊಂದಿದ್ದ ಅಮರನಾಥ್​ ನಾಗರಾಜನ್ 2019ರಲ್ಲಿ ತಮ್ಮ ಪತ್ನಿಯ ಸಾವಿನ ಬಳಿಕ ಸನ್ಯಾಸಿ ಜೀವನದತ್ತ ಹೆಜ್ಜೆ ಹಾಕಿದ್ದು ಸದ್ಯ ಸ್ವಾಮಿ ಸತ್ಯಾನಂದ ಸರಸ್ವತಿ ಎಂದೇ ಗುರುತಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here