ಮಂಗಳೂರು/ತಮಿಳುನಾಡು: ಮಾಜಿ ಒಲಿಂಪಿಯನ್ ಮತ್ತು ಭಾರತೀಯ ಬ್ಯಾಸ್ಕೆಟ್ ಬಾಲ್ ದಿಗ್ಗಜ ಅಮರನಾಥ್ ನಾಗರಾಜನ್ ಆಧ್ಯಾತ್ಮಿಕದ ಕಡೆಗೆ ವಾಲಿದ್ದು ಸ್ವಾಮಿ ಸತ್ಯಾನಂದ ಸರಸ್ವತಿಯಾಗಿದ್ದಾರೆ. ಒಂದೊಮ್ಮೆ ಕ್ರೀಡೆಯಲ್ಲಿ ಗುರುತಿಸಿಕೊಂಡಿದ್ದ ಇವರು ಈಗ ಸನ್ಯಾಸಿ ಜೀವನಕ್ಕೆ ತಮ್ಮ ಜೀವನವನ್ನು ಅರ್ಪಿಸಿದ್ದಾರೆ.
ಪ್ರತಿಭಾವಂತ ಕ್ರೀಡಾಪಡುವಾಗಿದ್ದ ಅಮರನಾಥ್ ನಾಗರಾಜನ್ ಹಾಕಿ ಮತ್ತು ಅಥ್ಲೆಟಿಕ್ಸ್ ಎರಡರಲ್ಲೂ ಮಿಂಚಿದ್ದರು. ಬಳಿಕ ಬ್ಯಾಸ್ಕೆಟ್ ಬಾಲ್ನಲ್ಲಿ ಖ್ಯಾತಿ ಗಳಿಸಿದ್ದರು. 1980ರಲ್ಲಿ ಮಾಸ್ಕೋದಲ್ಲಿ ನಡೆದ ಒಲಿಪಿಂಕ್ಸ್ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಉದ್ಯೋಗಿಯಾಗಿದ್ದು ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಆಗಿ ನಿವೃತ್ತಿ ಹೊಂದಿದ್ದ ಅಮರನಾಥ್ ನಾಗರಾಜನ್ 2019ರಲ್ಲಿ ತಮ್ಮ ಪತ್ನಿಯ ಸಾವಿನ ಬಳಿಕ ಸನ್ಯಾಸಿ ಜೀವನದತ್ತ ಹೆಜ್ಜೆ ಹಾಕಿದ್ದು ಸದ್ಯ ಸ್ವಾಮಿ ಸತ್ಯಾನಂದ ಸರಸ್ವತಿ ಎಂದೇ ಗುರುತಿಸಿಕೊಂಡಿದ್ದಾರೆ.