ಮಂಗಳೂರು: ಉರ್ವಾ ಪೊಲೀಸ್ ಠಾಣಾ ವ್ಯಾಪ್ತಿಯ ಕೋಡಿಕ್ಕಲ್ ವಿವೇಕಾನಂದ ನಗರದ ಮನೆಯೊಂದರಲ್ಲಿ ಜು.6ರಂದು ಕಳ್ಳತನ ಮಾಡಿದ ಆರೋಪಿಗಳನ್ನು ಬಂಧಿಸಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕು ಗಂಗೌಡನಹಳ್ಳಿ ಎಂಬಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿಗಳನ್ನು ವೆಂಕಟೇಶ್ ಯಾನೆ ವೆಂಕಿ (21), ಸಾಗರ್(21), ರಂಜಿತ್(20) ಎಂದು ಗುರುತಿಸಲಾಗಿದೆ. ಬಂಧಿತರಿಂದ 4, 64, 750 ರೂ. ಮೌಲ್ಯದ ಚಿನ್ನಾಭರಣಗಳನ್ನು ಮತ್ತು ಕೃತ್ಯಕ್ಕೆ ಬಳಸಿದ ಸ್ಕೂಟರ್ ಅನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆರೋಪಿಗಳಿಗೆ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿರುತ್ತದೆ.
ಪೊಲೀಸ್ ಆಯುಕ್ತ ಅನುಪಮ ಅಗರ್ ವಾಲ್ ರವರ ಆದೇಶದಂತೆ, ಉಪ ಪೊಲೀಸ್ ಆಯುಕ್ತರಾದ ಸಿದ್ದಾರ್ಥ ಗೋಯಲ್, ಮತ್ತು ದಿನೇಶ್ ಕುಮಾರ್ ನಿರ್ದೇಶನದಂತೆ ಸಹಾಯಕ ಪೊಲೀಸ್ ಆಯುಕ್ತ ಪ್ರತಾಪ್ ಸಿಂಗ್ ತೋರಟ್ ಮಾರ್ಗದಶನದಂತೆ ಉರ್ವಾ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಭಾರತಿ ಮತ್ತು ತಂಡದ ಹರೀಶ್ ಹೆಚ್ ವಿ, ಪಿಎಸ್ಐ, ಅನಿತಾ ಹೆಚ್.ಬಿ, ಪಿ.ಎಸ್.ಐ, ವಿನಯ್ ಕುಮಾರ್ ಎಎಸ್ಐ, ಮತ್ತು ಸಿಬ್ಬಂದಿಗಳಾದ ಪುಷ್ಟರಾಜ್, ರಾಮಚಂದ್ರ, ಸತೀಶ್ ಹೆಚ್.ಕೆ, ಪ್ರಮೋದ್.ಕೆ, ವೆಂಕಟೇಶ್, ಅಭಿಷೇಕ್, ಬಾಸ್ಕರ್, ಯಲ್ಲಾಲಿಂಗ, ಮಮತಾ, ಚಂದ್ರಹಾಸ್, ಶರತ್ ಹಾಗೂ ಮಂಗಳೂರು ನಗರ ಗಣಕಯಂತ್ರ ವಿಭಾಗದ ಸಿಬ್ಬಂದಿ ಮನೋಜ್ ರವರನ್ನೊಳಗೊಂಡ ತಂಡವು ಆರೋಪಿಗಳನ್ನು ಪತ್ತೆ ಹಚ್ಚಿ ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ. 80 ಗ್ರಾಂ ತೂಕದ ಆಭರಣ ಕಳವಾಗಿರುವ ಬಗ್ಗೆ ಉರ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.