ಇಥಿಯೋಪಿಯಾದಲ್ಲಿ ಭೀಕರ ಭೂಕುಸಿತ: ನೂರೈವತ್ತರ ಗಡಿ ದಾಟಿದ ಸಾವಿನ ಸಂಖ್ಯೆ

ಮಂಗಳೂರು/ಇಥಿಯೋಪಿಯಾ: ಭಾರೀ ಮಳೆಯಿಂದಾಗಿ ಇಥಿಯೋಪಿಯಾದಲ್ಲಿ ಭೀಕರ ಭೂಕುಸಿತ ಸಂಭವಿಸಿದ್ದು, ನೂರಾರು ಜನರು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ.

ದಕ್ಷಿಣ ಇಥಿಯೋಪಿಯಾದ ಕೆಂಚೋ ಶಾಚಾ ಗೊಜ್ಡಿ ಜಿಲ್ಲೆಯಲ್ಲಿ ಜು.22ರ ತಡರಾತ್ರಿ ಭಾರಿ ಮಳೆಯಿಂದ ಭೂ ಕುಸಿತ ಸಂಭವಿಸಿದೆ.ಘಟನೆಯಲ್ಲಿ 55 ಮಂದಿ ಮೃತರಾಗಿದ್ದು ಇಂದು ಸಾವಿನ ಸಂಖ್ಯೆ 157ಕ್ಕೆ ಏರಿದೆ.  ಬಲಿಯಾದವರಲ್ಲಿ ಚಿಕ್ಕ ಮಕ್ಕಳು ಮತ್ತು ಗರ್ಭಿಣಿಯರು ಸೇರಿದ್ದಾರೆ ಎಂದು  ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವ ಅಧಿಕಾರಿಗಳು ತಿಳಿಸಿದ್ದಾರೆ. ಮಣ್ಣಿನಡಿಯಲ್ಲಿ ಇನ್ನಷ್ಟು ಜನ ಸಿಲುಕಿಕೊಂಡಿರುವ ಸಾಧ್ಯತೆ ಇದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.

 

 

 

LEAVE A REPLY

Please enter your comment!
Please enter your name here