ಭಾರೀ ಗಾಳಿ ಮಳೆಗೆ ಹಾರಿದ ಕಟ್ಟಡದ ಮೇಲ್ಚಾವಣಿಯ ಶೀಟು

ಮಂಗಳೂರು: ಕಳೆದ ರಾತ್ರಿ ಸುರಿದ ಭಾರೀ ಗಾಳಿಮಳೆಯಿಂದಾಗಿ ಮಂಗಳೂರಿನ ಕೊಟ್ಟಾರ ಚೌಕಿ ಬಳಿಯ ಆಟೋ ವರ್ಲ್ಡ್‌ ಟವರ್‌ ಗೆ ಅಳವಡಿಸಲಾಗಿದ್ದ ಕಬ್ಬಿಣದ ಶೀಟಿನ ಮೇಲ್ಚಾವಣಿ ಪಕ್ಕದ ರಾಷ್ಟ್ರೀಯ ಹೆದ್ದಾರಿ ಮತ್ತು ಸರ್ವೀಸ್‌ ರಸ್ತೆಯ ಮೇಲೆ ಬಿದ್ದಿದೆ. ರಾತ್ರಿ 9.30ರ ಸುಮಾರಿಗೆ ಈ ಘಟನೆ ನಡೆದಿದ್ದು ವಿದ್ಯುತ್‌ ಕಂಬಗಳು ನೆಲಕ್ಕುರುಳಿದೆ. ತಕ್ಷಣ ಸ್ಥಳಕ್ಕಾಗಮಿಸಿದ ಸಂಚಾರಿ ವಿಭಾಗದ ಟ್ರಾಫಿಕ್‌ ಪೊಲೀಸರು ಮತ್ತು ಮೆಸ್ಕಾಂ ಸಿಬ್ಬಂದಿಗಳು ಶೀಟ್‌ ಗಳನ್ನು ಸುಗಮ ಸಂಚಾರಕ್ಕೆ ದಕ್ಕೆಯಾಗದಂತೆ ತೆರವುಗೊಳಿಸಿದರು.

ಈ ವೇಳೆ ಮೆಸ್ಕಾಂ ಅಧಿಕಾರಿಗಳು ಮತ್ತು ಪೊಲೀಸ್‌ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು. ತೆರವು ಕಾರ್ಯಾಚರಣೆ ನಡೆಯುತ್ತಿದ್ದಂತೆ ಕುಂಟಿಕಾನ ಕಡೆಯಿಂದ ಬರುತ್ತಿದ್ದ ಕಾರೊಂದು ರಾಷ್ಟ್ರೀಯ ಹೆದ್ದಾರಿಯಲ್ಲಿ ತುಂಬಿದ್ದ ನೀರಿನಿಂದಾಗಿ ಡಿವೈಡರ್‌ ಗೆ ಡಿಕ್ಕಿ ಹೊಡೆದು ಬಂದ ದಾರಿಗೆ ತಿರುಗಿ ನಿಂತ ಘಟನೆಯೂ ನಡೆಯಿತು.

LEAVE A REPLY

Please enter your comment!
Please enter your name here