



ಮಂಗಳೂರು/ ಇಡುಕ್ಕಿ: ಕೇರಳದಲ್ಲಿ ಭೂಕುಸಿತದಿಂದ ಭಾರಿ ಸಾವು ನೋವು ಮತ್ತು ವಿನಾಶದ ವರದಿಗಳ ನಡುವೆ ನೆರೆಯ ಇಡುಕ್ಕಿ ಜಿಲ್ಲೆಯಿಂದ ಬಂದ ವರದಿ ಎಲ್ಲರ ಮನಕಲಕಿದೆ.ಇಡುಕ್ಕಿಯ ಎರಡು ಮಕ್ಕಳ ತಾಯಿಯೊಬ್ಬರು ವಯನಾಡು ಭೂಕುಸಿತದಲ್ಲಿ ಪೋಷಕರನ್ನು ಕಳೆದುಕೊಂಡ ಹಸುಗೂಸುಗಳಿಗೆ ಎದೆಹಾಲುಣಿಸುವ, ನಿಸ್ವಾರ್ಥ ಸೇವೆಗೆ ಮುಂದಾಗಿದ್ದಾರೆ.



ಕೇರಳದ ಕೇಂದ್ರ ಭಾಗದ ಇಡುಕ್ಕಿಯಲ್ಲಿರುವ ತಮ್ಮ ನಿವಾಸದಿಂದ ಮಹಿಳೆ ಮತ್ತು ಆಕೆಯ ಪತಿ, 4 ವರ್ಷ ಹಾಗೂ 4 ತಿಂಗಳ ಎರಡು ಮಕ್ಕಳ ಜೊತೆ ವಯನಾಡಿಗೆ ತೆರಳಿದ್ದು,ಮಾರ್ಗ ಮಧ್ಯೆ ಮಾಧ್ಯಮಗಳ ಜೊತೆ ಮಾತನಾಡಿ, ‘ನಾನು ಎರಡು ಮಕ್ಕಳ ತಾಯಿ. ತಾಯಿ ಇಲ್ಲದ ಮಕ್ಕಳ ಪರಿಸ್ಥಿತಿ ಏನು ಎಂಬುದು ನನಗೆ ತಿಳಿದಿದೆ. ಅದರಿಂದಲೇ ನಾನು ಅನಾಥ ಮಕ್ಕಳಿಗೆ ಎದೆಹಾಲುಣಿಸುವ ನಿರ್ಧಾರಕ್ಕೆ ಬಂದಿದ್ದೇನೆ’ ಈ ಬಗ್ಗೆ ನನ್ನ ಗಂಡನ ಜೊತೆ ಚರ್ಚಿಸಿದಾಗ ಅವರೂ ನನ್ನ ನಿರ್ಧಾರಕ್ಕೆ ಬೆಂಬಲ ಸೂಚಿಸಿದ್ದಾರೆ ಎಂದು ಹೇಳಿದ್ದಾರೆ.


















