ಅಧಿಕಾರದ ಆಸೆಯಿಂದ ಬಿಜೆಪಿಯ ದ್ವೇಷದ ರಾಜಕಾರಣ – ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್.

ಮಂಗಳೂರು: ದೇಶದಲ್ಲಿ ವಿಪಕ್ಷ ನಾಯಕ ಇಲ್ಲದಂತೆ ಮಾಡಲು ಇಡಿ, ಸಿಬಿಐ ದಾಳಿಯನ್ನು ನಡೆಸುವ ಬಿಜೆಪಿಯ ಪ್ರಯತ್ನದ ಮುಂದುವರಿದ ಭಾಗವಾಗಿ ರಾಜ್ಯದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ 136 ಸ್ಥಾನಗಳಲ್ಲಿ ಗೆದ್ದಿರುವ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸುವ ಪ್ರಯತ್ನವನ್ನು ಬಿಜೆಪಿ ಹಾಗೂ ಜೆಡಿಎಸ್ ಮಾಡುತ್ತಿದೆ. ಪಾದಯಾತ್ರೆ ನಡೆಸುವ ಉಭಯ ಪಕ್ಷಗಳವರು ಮುಡಾ ಹಗರಣ ಯಾರ ಅವಧಿಯಲ್ಲಿ ಆಗಿದ್ದು, ಎಂಬುದನ್ನು ಜನರಿಗೆ ತಿಳಿಸಲಿ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್. ಆಗ್ರಹಿಸಿದ್ದಾರೆ.

ಬಿಜೆಪಿ ಅವಧಿಯಲ್ಲಿ ಆಗಿರುವ ಹಗರಣದ ಆರೋಪವನ್ನು ಸಿದ್ಧರಾಮಯ್ಯ ಹಾಗೂ ಡಿಕೆಶಿ ವಿರುದ್ಧ ಮಾಡುತ್ತಿರುವುದು ಸ್ಪಷ್ಟವಾಗಿರುವುದರಿಂದ ಜನತೆ ಖಂಡಿತಾ ನಿಮ್ಮನ್ನು ಕ್ಷಮಿಸಲಾರರು. ಸಿದ್ಧರಾಮಯ್ಯ ಸರ್ಕಾರದ ಜತೆ ಕಾಂಗ್ರೆಸ್ ಪಕ್ಷ ಹಾಗೂ ಜನತೆ ಇದ್ದಾರೆ ಎಂದ ಅವರು ಅನೈತಿಕ ರಾಜಕಾರಣವನ್ನು ಬಿಜೆಪಿಯವರು ಹುಟ್ಟಿಹಾಕಿದ್ದು, ಅದನ್ನು ಈಗಾಲೂ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಕೇವಲ ಅಧಿಕಾರದ ಆಸೆಯಿಂದ ದ್ವೇಷದ ರಾಜಕಾರಣ ಮಾಡಲು ಬಿಜೆಪಿ ಹೊರಟಿದೆ. ಮೊದಲಿನಿಂದಲೂ ನೇರವಾಗಿ ಆಡಳಿತಕ್ಕೆ ಬಾರದ ಬಿಜೆಪಿ ಪ್ರತೀ ಸಲವೂ ಶಾಸಕರುಗಳನ್ನು ಖರೀಧಿಸಿ ರಾಜಕೀಯ ಮಾಡುತ್ತಿದೆ ಎಂದು ದೂರಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಬಿಜೆಪಿ ಜನರ ದಾರಿ ತಪ್ಪಿಸುವ ಪ್ರಯತ್ನವನ್ನು ಮಾಡುತ್ತಿದ್ದು, ಜಿಲ್ಲಾ ಕಾಂಗ್ರೆಸ್ ಸರ್ಕಾರದ ಜೊತೆ ನಿಂತಿದೆ ಎಂದು ಹೇಳಿದರು.

LEAVE A REPLY

Please enter your comment!
Please enter your name here