ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಯುಎಇ ರಾಜಧಾನಿ ಅಬುದಾಬಿಗೆ ಇಂಡಿಗೋ ಸಂಸ್ಥೆ ಪ್ರತಿದಿನ ನೇರ ವಿಮಾನ ಹಾರಾಟ ಆರಂಭಿಸಿದೆ.
ಆ.9ರಿಂದ ಇಂಡಿಗೋದಿಂದ ಪ್ರತಿದಿನ ಅಬುದಾಬಿಗೆ ವಿಮಾನ ಹಾರಾಟ ಆರಂಭವಾಗಿದೆ. ದುಬೈ ನಂತರ ಮಂಗಳೂರಿನಿಂದ ಪ್ರತಿದಿನ ವಿಮಾನ ಸಂಚಾರದ ಎರಡನೇ ಸಾಗರೋತ್ತರ ತಾಣ ಇದಾಗಿದೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಪ್ರಸ್ತುತ ಎಂಟು ಮಧ್ಯಪ್ರಾಚ್ಯ ಸ್ಥಳಗಳಿಗೆ ಮತ್ತು ಆರು ದೇಶೀಯ ಸ್ಥಳಗಳಿಗೆ ಸಂಪರ್ಕ ಕಲ್ಪಿಸುತ್ತಿದೆ. ಏರ್ ಇಂಡಿಯಾ ಸಂಸ್ಥೆಯಿಂದ ಈಗಾಗಲೇ ಮಂಗಳೂರಿನಿಂದ ಗಲ್ಫ್ ರಾಷ್ಟ್ರಗಳಿಗೆ ವಿಮಾನಯಾನ ಲಭ್ಯವಿದೆ.