ಬಜೆಟ್ ಮುಖ್ಯಾಂಶಗಳು

1.ಹೊಸ ತೆರಿಗೆ ಪದ್ದತಿಯಲ್ಲಿಆದಾಯ ತೆರಿಗೆ ರಿಯಾಯಿತಿ ಮಿತಿಯನ್ನು 5 ಲಕ್ಷದಿಂದ 7 ಲಕ್ಷಕ್ಕೆ ಹೆಚ್ಚಿಸಲಾಗಿದೆ.

2.ಬಂಗಾರ, ಬೆಳ್ಳಿ, ವಜ್ರ, ಪ್ಲಾಟಿನಂ ದುಬಾರಿ

3.ರೆಡಿಮೆಡ್ ಬಟ್ಟೆ, ಸಿಗರೇಟು ದುಬಾರಿ

4.ವಿದೇಶಿ ವಾಹನಗಳ ಆಮದು ದುಬಾರಿ

5.ಹಸಿರು ಕೃಷಿ ಯೋಜನೆಗೆ ಪ್ರಧಾನಿ ಪ್ರಣಾಮ್ ಯೋಜನೆ

6.ಮೊಬೈಲ್ ಫೋನ್ ಕ್ಯಾಮರಾ ಲೆನ್ಸ್ ಆಮದು ಸುಂಕ ರದ್ದು

7.ಮೊಬೈಲ್, ಕ್ಯಾಮರಾ ಲೆನ್ಸ್, ಟಿವಿ ಬೆಲೆ ಇಳಿಕೆ

8.ಆರ್ ಬಿಐ ಮೂಲಕ ಪ್ರತ್ಯೇಕ ಪದವಿ ಶಿಕ್ಷಣಕ್ಕೆ ಅನುಮತಿ

9.ಮಹಿಳಾ ಸಮ್ಮಾನ್ ಸೇವಿಂಗ್ ಪತ್ರ ಯೋಜನೆ ಜಾರಿ

10.ಹಿರಿಯ ನಾಗರಿಕರಿಗೆ 15ರಿಂದ 30 ಲಕ್ಷ ಠೇವಣಿಗೆ ಅವಕಾಶ

11. 100 ನಿರ್ಣಾಯಕ ಯೋಜನೆಗಳು

12. ವಾಣಿಜ್ಯ ವಿವಾದ ಪರಿಹಾರ ಕಾರ್ಯಕ್ರಮ

13. 47 ಲಕ್ಷ ಯುವಕರಿಗೆ ಕಲಿಕಾ ವೇತನ

14. ಪ್ರವಾಸೋದ್ಯಮ ಅಭಿವೃದ್ದಿಗೆ ಹೊಸ ಆ್ಯಪ್

15. 2070ಕ್ಕೆ ಕಾರ್ಬನ್ ಮುಕ್ತ ಭಾರತ ನಿರ್ಮಾಣ ಗುರಿ

16. ಮಾಲಿನ್ಯ ನಿಯಂತ್ರಣಕ್ಕೆ ಸರಕಾರದ ಹಳೆ ವಾಹನಗಳು ಗುಜರಿಗೆ, ಹೊಸ ಸರಕಾರಿ ವಾಹನಗಳ ಖರೀದಿಗೆ ಕೇಂದ್ರದ ಅನುದಾನ

17. ಮುಂದಿನ ಹಣಕಾಸು ವರ್ಷದಲ್ಲಿ ರೈಲ್ವೆ ಇಲಾಖೆಯಲ್ಲಿ 2.40 ಲಕ್ಷ ಕೋಟಿ ಬಂಡವಾಳ ಹೂಡಿಕೆ

18. ಸೂಕ್ಷ್ಮ ನೀರಾವರಿ ಪ್ರೋತ್ಸಾಹಿಸಲು ಭದ್ರ ಮೇಲ್ದಂಡೆಗೆ 5630 ಕೋ.ರೂ.

19. ಪ್ರಧಾನಮಂತ್ರಿ ಆವಾಸ್ ಯೋಜನೆಯ ವೆಚ್ಚವನ್ನು ಶೇ.66ಕ್ಕೆ(79,000 ಕೋಟಿ)ಹೆಚ್ಚಳ

  • 20. ಏಕಲವ್ಯ ಮಾದರಿ ವಸತಿ ಶಾಲೆಗಳಿಗೆ 38,000 ಶಿಕ್ಷಕರ ನೇಮಕ

21. ಆರೋಗ್ಯ, ಕೃಷಿ, ಶಿಕ್ಷಣ ಕ್ಷೇತ್ರದಲ್ಲಿ ಕೃತಕ ಬುದ್ದಿಮತ್ತೆ ಸೆಂಟರ್

22. ನಗರೋತ್ಥಾನಕ್ಕಾಗಿ 10 ಸಾವಿರ ಕೋ.ರೂ. ಮೀಸಲು

23. ಎಂಎಸ್ಎಂ ಇ ಯೋಜನೆಗಳಿಗೆ ವಿವಾದ್ ಸೆ ವಿಶ್ವಾಸ ಯೋಜನೆ

24. ಸರಕಾರಿ ನೌಕರರಿಗಾಗಿ ಮಿಷನ್ ಕರ್ಮಯೋಗಿ

25. ಸರಕು ಸಾಗಣೆಗೆ 100 ಹೊಸ ಸಾರಿಗೆ ಯೋಜನೆ

26. ಕಲ್ಲಿದ್ದಲು, ಸಿಮೆಂಟ್, ಸ್ಟೀಲ್, ರಸಗೊಬ್ಬರ ಸಾಗಣೆ

27. ದೇಶದ ಎಲ್ಲ ನಗರಗಳು ಮ್ಯಾನ್ ಹೋಲ್ ನಿಂದ ಮುಕ್ತ ಗುರಿ

28. ದೇಶದಲ್ಲಿ 50 ಹೊಸ ಏರ್ ಪೋರ್ಟ್ ಗಳ ನಿರ್ಮಾಣ

29. ಉದ್ಯೋಗ ಸೃಷ್ಟಿಗೆ 10 ಲಕ್ಷ ಕೋಟಿ ರೂ. ಮೀಸಲು

30. ಭಾರತೀಯ ಸಿರಿ ಧಾನ್ಯ ಸಂಶೋಧನಾ ಸಂಸ್ಥೆಗೆ ಉತ್ತೇಜನ

31. ಕೃಷಿ ಸಾಲದ ಗುರಿ 20 ಲಕ್ಷ ಕೋಟಿಗೆ

32. 157 ಹೊಸ ನರ್ಸಿಂಗ್ ಕಾಲೇಜುಗಳ ಸ್ಥಾಪನೆ, ದೇಶದಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ವಿಶೇಷ ಆದ್ಯತೆ

33. ಮೀನುಗಾರಿಕೆಗೆ 6000 ಕೋ.ರೂ. ಮೀಸಲು

LEAVE A REPLY

Please enter your comment!
Please enter your name here