ರಾಖಿ ಸಾವಂತ್‌ ಪತಿ ಅದಿಲ್‌ ದುರಾನಿ ಬಂಧನ

ಮುಂಬೈ : ಮೈಸೂರು ಮೂಲದ ಉದ್ಯಮಿ ನಟಿ ರಾಖಿ ಸಾವಂತ್‌ ಪತಿ ಅದಿಲ್‌ ದುರಾನಿಯನ್ನು ಪೊಲೀಸರು ಬಂಧಿಸಿದ್ದಾರೆ. ಪತ್ನಿಯ ಮೇಲೆ ಹಲ್ಲೆ ಮತ್ತು ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಒಪ್ಪಿಗೆ ಇಲ್ಲದೆ ತೆಗೆದು ಕೊಂಡು ಹೋದ ಆರೋಪದಡಿ ಮೊಂಬೈ ನಗರದ ಒಷಿಯಾರಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅದಿಲ್‌ ದುರಾನಿ ಜೊತೆಗಿನ ವೈವಾಹಿಕ ಸಂಬಂಧ ಕೊನೆಗೊಂಡಿದೆ ಎಂದು ಎರಡು ದಿನಗಳ ಹಿಂದೆ ಹೇಳಿಕೆ ನೀಡಿದ್ದ ರಾಖಿ ಸಾವಂತ್‌ ಮರುದಿನ ಭಿನ್ನಾಭಿಪ್ರಾಯ ಬಗೆ ಹರಿದಿದೆ ಎಂದು ಹೇಳಿಕೆ ನೀಡಿದ್ದರು. ಈಗ ಮತ್ತೆ ಅದಿಲ್‌ ದುರಾನಿ ವಿರುದ್ದ ದೂರು ದಾಖಲಿಸಿದ್ದಾರೆ.

LEAVE A REPLY

Please enter your comment!
Please enter your name here