ಭೂಮಿಗೆ ಬಂದ ಟ್ರಾನ್ಸ್‌ ಜೆಂಡರ್‌ ಮ್ಯಾನ್‌ ಸಹದ್‌ ಫಾಝಿಲ್ ಕಂದ

ಕೊಝಿಕ್ಕೋಡ್:‌ ದೇಶದಲ್ಲಿ ಮೊದಲ ಬಾರಿ ಲಿಂಗ ಪರಿವರ್ತಿತ ವ್ಯಕ್ತಿಯೊಬ್ಬರು ಗರ್ಭಧಾರಣೆ ಮಾಡಿಸಿಕೊಂಡು ಕಂದನ ನಿರೀಕ್ಷೆಯಲ್ಲಿದ್ದ ಸಹದ್‌ ಫಾಝಿಲ್‌ ಮತ್ತು ಸಿಯಾ ದಂಪತಿಗಳು ಶುಭ ಸುದ್ದಿಯನ್ನು ನೀಡಿದ್ದಾರೆ. ಲಿಂಗ ಪರಿವರ್ತಿತ ಸಹದ್‌ ಫಾಝಿಲ್‌ ಕೊಝಿಕ್ಕೊಡ್‌ ನ ಮೆಡಿಕಲ್‌ ಕಾಜೇಜು ಮತ್ತು ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ. ಆದರೆ ಹುಟ್ಟಿದ ಮಗು ಹೆಣ್ಣೋ ಗಂಡೋ ಎನ್ನುವ ಕುತೂಹಲಕ್ಕೆ ಇನ್ನೂ ತೆರೆ ಬಿದ್ದಿಲ್ಲ. ಮಗುವಿನ ಲಿಂಗ ಯಾವುದೆನ್ನುವುದರ ಬಗ್ಗೆ ಇನ್ನೂ ಅಧಿಕೃತವಾಗಿ ಮಾಹಿತಿಯನ್ನು ದಂಪತಿಗಳು ನೀಡದೆ ಇರುವುದರಿಂದ ಸಾರ್ವಜನಿಕರ ಕುತೂಹಲ ಇನ್ನಷ್ಟು ಹೆಚ್ಚಿದೆ.

LEAVE A REPLY

Please enter your comment!
Please enter your name here