‘ವೆಲೆಂಟೈನ್ಸ್‌ ಡೇ ಯನ್ನುಕೌ ಹಗ್‌ ಡೇ ಯಾಗಿ ಆಚರಿಸುವಂತೆ ಪ್ರಾಣಿ ಕಲ್ಯಾಣ ಮಂಡಳಿ ಕರೆ

ಹೊಸದಿಲ್ಲಿ: ಫೆಬ್ರವರಿ 14 ರಂದು ʼದನಗಳನ್ನು ಆಲಂಗಿಸುವ ದಿನ/ ಕೌ ಹಗ್‌ ಡೇʼ ಎಂದು ಆಚರಿಸಲು ಪ್ರಾಣಿ ಕಲ್ಯಾಣ ಮಂಡಳಿ ಜನರಿಗೆ ಕರೆ ನೀಡಿದೆ. ‘ವೆಲೆಂಟೈನ್ಸ್‌ ಡೇ’ ಅಥವಾ ಪ್ರೇಮಿಗಳ ದಿನಾಚರಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಎನ್ನುವಾಗ ಪ್ರಾಣಿ ಕಲ್ಯಾಣ ಮಂಡಳಿಯು ಹೊಸ ಪರಿಕಲ್ಪನೆಯೊಂದನ್ನು ಮುಂದಿಟ್ಟಿದ್ದು, ಜನರಿಗೆ ಭಾವನಾತ್ಮಕ ಸಮೃದ್ಧತೆ ಮತ್ತು ಸಂತೋಷನ್ನು ತರಲು ‘ಕೌ ಹಗ್‌ ಡೇ’ ಆಚರಿಸಲು ಬಯಸಿದ್ದಾಗಿ ಹೇಳಿದೆ.  

ಭಾರತೀಯ ಸಂಸ್ಕೃತಿ ಮತ್ತು ಗ್ರಾಮೀಣ ಆರ್ಥಿಕತೆಯಲ್ಲಿ ದನಗಳ ಮಹತ್ವವನ್ನು ತನ್ನ ‘ಮನವಿ’ಯಲ್ಲಿ ವಿವರಿಸಿರುವ ಪ್ರಾಣಿ ಕಲ್ಯಾಣ ಮಂಡಳಿ ಮೀನುಗಾರಿಕಾ, ಪಶುಸಂಗೋಪನೆ ಮತ್ತು ಹೈನೋದ್ಯಮ ಸಚಿವಾಲಯದೊಂದಿಗೆ ಜಂಟಿಯಾಗಿ ಕೌ ಹಗ್‌ ಡೇ ಆಚರಿಸಲು ನಿರ್ಧರಿಸಿದೆ. ಎಲ್ಲಾ ಗೋ ಪ್ರೇಮಿಗಳು ಫೆಬ್ರವರಿ 14 ದಿನಾಂಕವನ್ನು ಗೋಮಾತೆಯ ಮಹತ್ವವನ್ನು ಗಮನದಲ್ಲಿರಿಸಿ ಹಾಗೂ ಜೀವನದಲ್ಲಿ ಸಕಾರಾತ್ಮಕತೆ ಮತ್ತು ಸಂತೋಷಕ್ಕಾಗಿ ಕೌ ಹಗ್‌ ಡೇ ಆಗಿ ಆಚರಿಸಬೇಕು ಎಂದು ಮಂಡಳಿ ಹೇಳಿದೆ.

LEAVE A REPLY

Please enter your comment!
Please enter your name here