ಮಂಗಳೂರು(ನವದೆಹಲಿ): ಇಂಡೋನೇಷ್ಯಾದಲ್ಲಿ ಮಹಿಳೆಯೊಬ್ಬರು ಮೂರು ಕಾಲುಗಳು, ನಾಲ್ಕು ಕೈ ಮತ್ತು ಒಂದು ಮರ್ಮಾಂಗ ಹೊಂದಿರುವ ಸಯಾಮಿ ಅವಳಿ ಮಕ್ಕಳಿಗೆ 2018 ರಲ್ಲಿ ಜನ್ಮ ನೀಡಿದ್ದು, ಇತ್ತೀಚೆಗೆ ವೈದ್ಯರ ತಂಡವೊಂದು ಸಯಾಮಿ ಅವಳಿ ಮಕ್ಕಳ ಮೂರನೇ ಕಾಲನ್ನು ಶಸ್ತ್ರ ಚಿಕಿತ್ಸೆಯ ಮೂಲಕ ಬೇರ್ಪಡಿಸಿದ್ದಾರೆ.
ಇಶಿಯೋಪಾಗಸ್ ಟ್ರಿಪಸ್ ಕಂಜಾಯಿಂಡ್ ಟ್ವಿನ್ಸ್ ಎಂದು ಕರೆಯಲ್ಪಡುವ ಇಂತಹ ಸಯಾಮಿ ಅವಳಿ ಜನಿಸಿದರೆ ಶಿಶು ಸಾಯುವ ಸಾಧ್ಯತೆಯಿರುತ್ತದೆ. ಆದರೆ ಈ ಅವಳಿ ಮಕ್ಕಳು ಆರೋಗ್ಯದಿಂದಿವೆ ಎಂದು ವೈದ್ಯರು ಹೇಳಿದ್ದಾರೆ. ಈ ಅವಳಿ ಮಕ್ಕಳು ಮೂರು ಕಾಲುಗಳು, ನಾಲ್ಕು ಕೈ ಹಾಗೂ ಒಂದು ಮರ್ಮಾಂಗ, ಒಂದು ಮೂತ್ರ ಕೋಶ, ಗುದನಾಳವನ್ನು ಹೊಂದಿದ್ದು, ಈ ಸ್ಥಿತಿಯಿಂದಾಗಿ ಈ ಅವಳಿ ಮಕ್ಕಳಿಗೆ ಕೂರಲು ಸಾಧ್ಯವಾಗದೆ 3 ವರ್ಷಗಳ ಕಾಲ ಹಾಸಿಗೆಯಲ್ಲಿಯೇ ಮಲಗಬೇಕಾಗಿತ್ತು. ವೈದ್ಯರು ಸೊಂಟದ ಮೂಳೆಗಳನ್ನು ಸರಿಪಡಿಸಲು ಸಾಕಷ್ಟು ಪ್ರಯತ್ನಗಳನ್ನು ಮಾಡಿ, ಈಗ ಅವರಿಗೆ ಸರಿಯಾಗಿ ಕುಳಿತುಕೊಳ್ಳುವಂತೆ ಮಾಡಿಕೊಟ್ಟಿದ್ದಾರೆ. 50 ಸಾವಿರದಿಂದ 2 ಲಕ್ಷ ಗರ್ಭಾಧಾರಣೆಗಳಲ್ಲಿ ಒಂದು ಇಂತಹ ಪ್ರಕರಣಗಳು ಕಾಣಿಸಿಕೊಳ್ಳುತ್ತವೆ. ಗರ್ಭಾಶಯದಲ್ಲಿ ಒಂದು ಫಲವತ್ತಾದ ಮೊಟ್ಟೆ ವಿಭಜನೆಗೊಂಡು ಎರಡು ಭಾಗವಾಗಿ ಬೆಳವಣಿಗೆ ಹೊಂದಲು ಆರಂಭಿಸಿದಾಗ ಸಯಾಮಿ ಅವಳಿ ಮಕ್ಕಳು ಜನಿಸುತ್ತವೆ.