ಕೊರೊನಾ ಭೀತಿ 3 ವರ್ಷದಿಂದ ಗೃಹ ಬಂಧನದಲ್ಲಿದ್ದ ಬಾಲಕ

ದೆಹಲಿ: ಕೊರೊನಾ ಸೋಂಕಿನ ಭೀತಿಯಿಂದ ಮಹಿಳೆಯೊಬ್ಬಳು ತನ್ನ 10 ವರ್ಷದ ಮಗನನ್ನು ಬರೋಬ್ಬರಿ ಮೂರು ವರ್ಷ ಕಾಲ ಮನೆಯೊಳಗೇ ಕೂಡಿ ಹಾಕಿದ ಘಟನೆ ದೆಹಲಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಗುರುಗಾಂವ್​ನ ಮಾರುತಿ ಕುಂಜ್ ನಗರ ನಿವಾಸಿ ಮುನ್ಮುನ್ ಮಾಝಿ ಎಂಬಾಕೆ ತಾನೂ ಮನೆಯೊಳಗೆ ಬಂಧಿಯಾಗಿದ್ದುದಲ್ಲದೆ ಮಗನನ್ನೂ ಕೂಡಿ ಹಾಕಿದ್ದಳು. 2020ರಿಂದ ಇವರಿಬ್ಬರೂ ಮನೆಯೊಳಗೆ ಸ್ವಯಂ ಗೃಹ ಬಂಧನ ವಿಧಿಸಿಕೊಂಡಿದ್ದರು. ಈಕೆಯ ಪತಿ ಸುಜನ್ ಮಾಝಿ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದು, ಕೊರೊನಾ ಭಯದಿಂದ ಆತನನ್ನೂ ಆಕೆ ಮನೆಯೊಳಗೆ ಬರಲು ಬಿಡುತ್ತಿರಲಿಲ್ಲ. ಬಾಗಿಲು ತೆರೆಯುವಂತೆ ಪತಿ ಅನೇಕ ಬಾರಿ ಪತ್ನಿಯಲ್ಲಿ ಕೋರಿಕೊಂಡರೂ ಆಕೆ ಬಾಗಿಲು ತೆರೆಯುತ್ತಿರಲಿಲ್ಲ.ಇದರಿಂದ ಪತಿ ಸುಜನ್ ಮಾಝಿ ಅದೇ ಪ್ರದೇಶದಲ್ಲಿ ಬಾಡಿಗೆ ಮನೆ ಪಡೆದು ವಾಸವಾಗಿದ್ದರು. ಕೊರೊನಾ ಭಯದಿಂದಾಗಿ ಮನೆಯೊಳಗೆ ಸೇರಿಸದೆ, ಮನವೊಲಿಕೆಗೂ ಬಗ್ಗದ  ಪತ್ನಿ ಜೊತೆ   ವೀಡಿಯೋ ಕರೆಗಳ ಮಾಡಿ  ಮಾತುಕತೆ ನಡೆಸಬೇಕಾದ ಅನಿವಾರ್ಯತೆ ಸುಜನ್ ಅವರದಾಗಿತ್ತು. ಮೂರು ವರ್ಷಗಳ ಬಳಿಕ ಫೆ.21 ರಂದು ಆರೋಗ್ಯ, ಪೊಲೀಸ್ ಮತ್ತು ಮಕ್ಕಳ ಸೇವಾ ಇಲಾಖೆ ಅಧಿಕಾರಿಗಳ ತಂಡದೊಂದಿಗೆ  ಮನೆಗೆ ತೆರಳಿ ಪುತ್ರನನ್ನು ಮನೆಯಿಂದ ಹೊರ ತಂದಿದ್ದಾರೆ. 

LEAVE A REPLY

Please enter your comment!
Please enter your name here