ಹೊಳೆನರಸೀಪುರ: ಕುಡಿದ ಅಮಲಿನಲ್ಲಿ ಜನರಿಗೆ ತೊಂದರೆ ಕೊಡುತ್ತಿದ್ದ ಮೂವರು ರೌಡಿಶೀಟರ್ಗಳಿಗೆ ಸಾರ್ವಜನಿಕರೇ ಥಳಿಸಿರುವ ಘಟನೆ ಹಳ್ಳಿಮೈಸೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಕೊಲೆ ಕೇಸ್ನಲ್ಲಿ ಆರೋಪಿಯಾಗಿದ್ದ ಯಾಚೇನಹಳ್ಳಿ ಚೇತು, ಉಲಿವಾಲ ಚೇತು ಮತ್ತು ನೈಂಟಿ ವಿಶ್ವ ಎಂಬವರು ಥಳಿತಕ್ಕೊಳಗಾದವರು. ನಾಲ್ಕು ದಿನದ ಹಿಂದೆ ತಾಲೂಕಿನ ಜೋಡಿ ಗುಬ್ಬಿಯ ಬಾರ್ವೊಂದರಲ್ಲಿ ಕುಡಿದು ಬಿಲ್ ಕೊಡದೆ ಬಾರ್ ಕ್ಯಾಷಿಯರ್ ಮೇಲೆ ಚಾಕುವಿನಿಂದ ದಾಳಿ ಮಾಡಿ ಜನರಿಗೆ ಬೆದರಿಕೆ ಹಾಕಿದ್ದರು.
ಇವರ ಹುಚ್ಚಾಟದಿಂದ ರೋಸಿ ಹೋದ ಸಾರ್ವಜನಿಕರು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಲ್ಲದೇ ಬಟ್ಟೆ ಬಿಚ್ಚಿ ರಸ್ತೆಯಲ್ಲಿ ಉರುಳಾಡಿಸಿ ಬಿಸಿ ಮುಟ್ಟಿಸಿದ್ದಾರೆ. ಈ ಘಟನೆಯ ವೀಡಿಯೊ ಎಲ್ಲೆಡೆ ವೈರಲ್ ಆಗಿದೆ. ಬಾರ್ ಕ್ಯಾಷಿಯರ್ ದೂರು ಆಧರಿಸಿ ಮೂವರು ಆರೋಪಿಗಳ ವಿರುದ್ಧ ಕೊಲೆಯತ್ನ ಕೇಸ್ ದಾಖಲಿಸಲಾಗಿದೆ. .