ಹೊಸದಿಲ್ಲಿ: ದಿ ಹಿಂದೂ ಪತ್ರಿಕೆಯ ಹಿರಿಯ ಉಪ ಸಂಪಾದಕ ದಿನಕರ್ ಇಂದೋರ್ನಲ್ಲಿ ನಿಧನರಾಗಿದ್ದಾರೆ. ಹಿರಿಯ ಕ್ರೀಡಾ ಲೇಖಕರಾದ ದಿನಕರ್ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯಾಟದ ವರದಿ ಮಾಡಿದ್ದರು. ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ನ ವರದಿ ಮಾಡಲು ಅಹಮದಾಬಾದ್ಗೆ ತೆರಳಲು ತಯಾರಿ ನಡೆಸಿದ್ದ ದಿನಕರ್ ತಮ್ಮ ಹೋಟೆಲ್ ಕೋಣೆಯಲ್ಲಿ ಕುಸಿದುಬಿದ್ದು ಸಾವನ್ನಪ್ಪಿದ್ದಾರೆ.
‘ದಿ ಹಿಂದೂ’ ಗ್ರೂಪ್ನೊಂದಿಗೆ ಮೂರು ದಶಕಗಳಿಗೂ ಹೆಚ್ಚು ಸಮಯ ಸೇವೆ ಸಲ್ಲಿಸಿರುವ 57 ವರ್ಷದ ದಿನಕರ್ ತಮ್ಮ ತಂದೆಯನ್ನು ಅಗಲಿದ್ದಾರೆ.