ಮದ್ಯಪಾನಿಯ ಹೊಟ್ಟೆಯಲ್ಲಿ ವೋಡ್ಕಾ ಬಾಟಲ್‌ -ಶಸ್ತ್ರಚಿಕಿತ್ಸೆಯಿಂದ ಹೊರಕ್ಕೆ

ನೇಪಾಳ : ವಿಪರೀತ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ನೇಪಾಳ ಮೂಲದ ಪಾನಪ್ರಿಯ ವ್ಯಕ್ತಿಯ ಹೊಟ್ಟೆಯಿಂದ ವೋಡ್ಕಾ ಬಾಟಲಿಯೊಂದನ್ನು  ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದ ಅಚ್ಚರಿಯ ಘಟನೆ  ಬೆಳಕಿಗೆ ಬಂದಿದೆ.

ರೌತಾಹರಿ ಜಿಲ್ಲೆಯ ನುರ್ಸಾದ್‌ ಮನ್ಸೂರಿ ಎಂಬ ವ್ಯಕ್ತಿಯೊಬ್ಬ ಭಾರೀ ಹೊಟ್ಟೆ ನೋವಿನಿಂದ ನರಳಾಡುತ್ತಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಿ  ವೈದ್ಯರ ಸಲಹೆಯಂತೆ ಸ್ಕ್ಯಾನಿಂಗ್‌ ಮಾಡಲಾಗಿದೆ. ಈ ವೇಳೆ ವಿಚಿತ್ರ ವಸ್ತುವೊಂದು  ಹೊಟ್ಟೆಯಲ್ಲಿರುವುದು ಪತ್ತೆಯಾಗಿದೆ.  ಗೆ ಒಳಪಡಿಸಿ ಆತನ ಹೊಟ್ಟೆಯಿಂದ  ವೈದ್ಯರು ವೋಡ್ಕಾ ಬಾಟಲಿಯನ್ನು ಹೊರತೆಗೆದಿದ್ದಾರೆ. ಇದನ್ನು ನೋಡಿ ವೈದ್ಯರು ಬೆಚ್ಚಿ ಬಿದ್ದರಾದರೂ ವ್ಯಕ್ತಿ ಮಾತ್ರ ಪ್ರಾಣಾಪಾಯದಿಂದ ಪಾರಾಗಿದ್ದಾನೆ. 

LEAVE A REPLY

Please enter your comment!
Please enter your name here