ಡ್ರಮ್‌ನಲ್ಲಿ ಮಹಿಳೆಯ ಶವ- ಸರಣಿ ಹಂತಕರ ಕೈವಾಡದ ಶಂಕೆ ?

ಬೆಂಗಳೂರು: ಬೆಂಗಳೂರಿನ ಸರ್‌.ಎಂ ವಿಶ್ವೇಶ್ವರಯ್ಯ ಟರ್ಮಿನಲ್‌ ರೈಲು ನಿಲ್ದಾಣದಲ್ಲಿ ಪ್ಲಾಸ್ಟಿಕ್‌ ಡ್ರಮ್‌ ಒಂದರಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿದೆ. ಕಳೆದ 2 ತಿಂಗಳ ಹಿಂದೆ ಮಹಿಳೆಯರ ಶವವನ್ನು ಡ್ರಮ್‌ ಹಾಗು ಚೀಲದಲ್ಲ ತುಂಬಿ ಯಶವಂತಪುರ ಹಾಗು ಬಯ್ಯಪ್ಪನಹಳ್ಳಿ ರೈಲ್ವೇ ನಿಲ್ದಾಣದಲ್ಲಿ ಇಟ್ಟು ಹೋಗಿದ್ದ ಘಟನೆಯ ಮಾದರಿಯಲ್ಲೇ ಈ ಪ್ರಕರಣವು ನಡೆದಿದೆ. 3 ವ್ಯಕ್ತಿಗಳು ಡ್ರಮನ್ನು ಹೊತ್ತೊಯ್ದು ರೈಲು ನಿಲ್ದಾಣದಲ್ಲಿ ಇಟ್ಟಿರುವ ಸಿಸಿ ಟಿವಿ ದೃಶ್ಯ ಲಭ್ಯವಾಗಿದ್ದು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಮೃತ ಮಹಿಳೆಯ ಗುರುತು ಇನ್ನೂ ಪತ್ತೆಯಾಗಿಲ್ಲ. ಬೆಂಗಳೂರಿನಲ್ಲಿ ಸರಣಿ ಹಂತಕರ ಕೈವಾಡದ ಶಂಕೆ ವ್ಯಕ್ತವಾಗಿದ್ದು ಹಿಂದಿನ ಪ್ರಕರಣಗಳ ಜೊತೆಗೆ ಇದನ್ನೂ ಗಂಭೀರವಾಗಿ ತೆಗೆದುಕೊಂಡಿರುವ ರೈಲ್ವೇ ಪೊಲೀಸರು ಹಂತಕರ ಪತ್ತೆಗೆ ತೀವ್ರ ಕಾರ್ಯಾಚರಣೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here