ಗಡ್ಡ,ಮೀಸೆ ಹೊತ್ತ ಮಹಿಳೆಗೆ ಡಿಮ್ಯಾಂಡಪ್ಪೋ ‌ಡಿಮ್ಯಾಂಡ್

ಮಂಗಳೂರು: ಮುಖದ ಮೇಲಿನ ಅನಾವಶ್ಯಕ ಕೂದಲನ್ನು ತೆಗೆಯಲು ಇಂದು ವೈದ್ಯ ಶಾಸ್ತ್ರದಲ್ಲಿ ಹಲವು ಪರಿಣಾಮಕಾರಿ ಚಿಕಿತ್ಸೆ ಲಭ್ಯವಿದೆ. ಮಾತ್ರವಲ್ಲ ಮನೆಯಲ್ಲೇ ದೊರೆಯುವ ನೈಸರ್ಗಿಕ ಪದಾರ್ಥಗಳನ್ನು ಬಳಸಿ ಮುಖದ ಕೂದಲನ್ನು ಶಾಶ್ವತವಾಗಿ ತೊಡೆದು ಹಾಕ ಬಹುದಾಗಿದೆ. ಆದರೆ ಇಲ್ಲೊಬ್ಬಳು ಮಹಿಳೆ ತನ್ನ ಮುಖದ ಮೇಲೆ ಬೆಳದ ಕೂದಲನ್ನು ಯಾವ ರೀತಿಯಿಂದಲೂ, ಯಾವುದೇ ಕಾರಣಕ್ಕೂ, ತೆಗೆಯಲು ಒಪ್ಪದೇ ಗಡ್ಡ, ಮೀಸೆ ಬಿಟ್ಟು ಪುರುಷರಂತಿದ್ದಾಳೆ. ಕಳೆದ ಹಲವು ವರ್ಷಗಳಿಂದ ಮುಖದ ಮೇಲಿನ ಕೂದಲಿಗೆ ಮುಕ್ತಿ ನೀಡುವಂತೆ ಹೇಳುತ್ತಿದ್ದ ಪತಿಯ ಮನವಿಯನ್ನು ಸಾರಾಸಗಟಾಗಿ ತಿರಸ್ಕರಿಸಿರುವ ಈಕೆಗೆ ಈಗ ಪತಿಯೇ ಡೈವೋರ್ಸ್‌ ನೀಡಿದ ಘಟನೆ ಪಂಜಾಬ್‌ ನಲ್ಲಿ ನಡೆದಿದೆ. 

ಪಂಜಾಬ್‌ ನ ಮನ್‌ದೀಪ್‌ ಎಂಬ ಮಹಿಳೆ ತನ್ನ ಮುಖದ ಮೇಲೆ ಕೂದಲು ಬೆಳೆಯಲು ಆರಂಭಿಸಿದ ಬಳಿಕ ಅದನ್ನು ತೆಗೆಯುವ ಪ್ರಯತ್ನ ಮಾಡದೆ  ಮುಖದ ಮೇಲಿನ ಕೂದಲನ್ನು ಹಾಗೆಯೇ ಬಿಟ್ಟುಕೊಳ್ಳುವ ನಿರ್ಧಾರ ಮಾಡಿದ್ದಾಳೆ. ಪತಿಯ ಯಾವುದೇ ಮಾತಿಗೂ ಜಗ್ಗದೇ ಮುಖದ ಮೇಲಿನ ಕೂದಲು ಬೆಳೆಸುವ ತನ್ನ ನಿರ್ಧಾರದಿಂದ ಹಿಂದೆ ಸರಿಯಲು ನಿರಾಕರಿಸಿದ್ದಳು. ಇದೇ ಕಾರಣಕ್ಕೆ ಕಳೆದ ಹತ್ತಕ್ಕೂ ಹೆಚ್ಚು ವರ್ಷ ಜತೆಯಾಗಿದ್ದ ಪತಿ ದೂರವಾಗಿದ್ದಾನೆ. ಪತಿ ದೂರವಾದ ಬಳಿಕ ಮನನೊಂದು ಮಾನಸಿಕ ಸ್ವಸ್ಥತೆಗಾಗಿ  ಗುರುದ್ವಾರಕ್ಕೆ ಹೋಗಲು ಪ್ರಾರಂಭಿಸಿದರೂ ಆಕೆ ತನ್ನ ಮುಖದ ಮೇಲಿನ ಕೂದಲನ್ನು ಕ್ಷೌರ ಮಾಡಿಸಲು ಮಾತ್ರ ನಿರಾಕರಿಸಿ ಗಡ್ಡವನ್ನು ಹಾಗೆಯೇ ಬಿಟ್ಟಿದ್ದಾಳೆ. ಗಡ್ಡ, ಮೀಸೆ ಬಿಟ್ಟು ಪುರುಷರಂತೆ ಕಾಣುವ ಮನ್‌ದೀಪ್‌ ಈಗ ಪಂಜಾಬ್‌ನಲ್ಲಿ ತನ್ನ ಸಹೋದರರೊಂದಿಗಿದ್ದು, ಕೃಷಿ ಕೆಲಸ ಮಾಡುತ್ತಿದ್ದಾರೆ.

LEAVE A REPLY

Please enter your comment!
Please enter your name here