ಮಂಗಳೂರು: ಭಾರತ ಪ್ರವಾಸದಲ್ಲಿರುವ ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿದಾ ಅವರು ಮಾ.20ರ ಸೋಮಾವಾರದಂದು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ದೆಹಲಿಯ ಬುದ್ದ ಜಯಂತಿ ಪಾರ್ಕ್ ಗೆ ಭೇಟಿ ನೀಡಿದ ವೇಳೆ ಪಾನಿಪೂರಿ/ಗೋಲ್‌ಗಪ್ಪ ಸವಿದಿದ್ದಾರೆ.
ಪ್ರಧಾನಿ ಮೋದಿ ಜಪಾನ್ ಪ್ರಧಾನಿಗೆ ಪಾನಿಪೂರಿ ಪಾಕ ವಿಧಾನದ ಕುರಿತು ವಿವರಿಸುತ್ತಾ ಇಬ್ಬರೂ ಪಾನಿಪೂರಿಯನ್ನು ಸವಿಯುವ ಮತ್ತು ಮಾವಿನ ಹಣ್ಣಿನ ಲಸ್ಸಿಯನ್ನು ಸೇವಿಸುವ ಆನಂದಮಯ ಕ್ಷಣದ ಕುರಿತಾದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಜನಸಾಮಾನ್ಯ ಭಾರತೀಯರ ಇಷ್ಟದ ಪಾನಿಪೂರಿ/ಗೋಲ್‌ಗಪ್ಪವನ್ನು ಸವಿಯುವ ಜಪಾನ್ ಪ್ರಧಾನಿ ಮತ್ತು ಭಾರತದ ಪ್ರಧಾನಿಯ ವಿಡಿಯೋ ಸಾಕಷ್ಟು ವೈರಲ್ ಆಗಿದೆ.
ಈ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ