ತುಳುವಿಗೆ ಕೊಡಿ ಮನ್ನಣೆ – ಇಲ್ಲದಿದ್ದರೆ ಬಹಿಷ್ಕರಿಸುವೆವು ಚುನಾವಣೆ

ಮಂಗಳೂರು: ಇತ್ತೀಚಿಗೆ ತುರ್ತಾಗಿ ರಾಜ್ಯ ಸರಕಾರ ತುಳುವಿಗೆ ಭಾಷಾ ಸ್ಥಾನಮಾನ ಘೋಷಿಸಲು ವರದಿ ನೀಡುವಂತೆ ಸಮಿತಿಯೊಂದನ್ನು ರೂಪೀಕರಿಸಿದ್ದು, ಸಮಿತಿ ಸರಕಾರಕ್ಕೆ ವರದಿ ಸಲ್ಲಿಸಿದೆ. ಆದರೆ ಸರಕಾರ ಇದುವರೆಗೆ ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸರಕಾರ ತುಳು ಬಾಷೆಯನ್ನು ಅಧಿಕೃತ ಗೊಳಿಸದಿದ್ದರೆ ತುಳುನಾಡಿನಾದ್ಯಂತ ಚುನಾವಣೆ ಬಹಿಷ್ಕಾರ ಮಾಡುವುದಾಗಿ ಮೂಡಬಿದ್ರೆ ತುಳುಕೂಟದ ಮತ್ತು ಅಖಿಲ ಭಾರತ ತುಳು ಒಕ್ಕೂಟದ ಕೋಶಾಧಿಕಾರಿ ಚಂದ್ರಹಾಸ ದೇವಾಡಿಗ ಹೇಳಿದ್ದಾರೆ.

ಕದ್ರಿ ಗೊರಕ್ಷನಾಥ ಸಭಾಂಗಣದಲ್ಲಿ ಆಯೋಜಿಸಿದ್ದ ” ನಿಕುಲು ಬರೊಚ್ಚಿ – ಎಂಕ್ಲು ಓಟು ಪಾಡುಜ ” ಅಭಿಯಾನದ ಪೂರ್ವಭಾವಿ ಸಭೆಯಲ್ಲಿ ಅವರು ಈ ವಿಷಯ ಹೇಳಿದ್ದಾರೆ. ಇದೇ ವೇಳೆ ಸಭೆಯಲ್ಲಿ ಉಪಸ್ಥಿತರಿದ್ದ ತುಳುನಾಡ ರಕ್ಷಣಾ ವೇದಿಕೆ ಅಧ್ಯಕ್ಷ ಯೋಗೇಶ್ ಶೆಟ್ಟಿ ಜೆಪ್ಪು, ತುಳುನಾಡಿಗೆ ಆಗುವ ಅನ್ಯಾಯ ಸಹಿಸಲು ಅಸಾಧ್ಯ. ಶಾಸನ ಸಭೆಗೆ ಆರಿಸಿ ಕಳುಹಿಸಿದ ಜನಪ್ರತಿನಿಧಿಗಳಿಗೆ ಮತ್ತು ಸರಕಾರಕ್ಕೆ ತುಳು ಬಗ್ಗೆ ನಿರ್ಲಕ್ಷ ದೋರಣೆಯಾದರೆ ತುಳುನಾಡಿನ ಪ್ರತಿ ಗ್ರಾಮದಲ್ಲೂ ಚುನಾವಣಾ ಬಹಿಷ್ಕಾರ ಅಭಿಯಾನ ಅನಿವಾರ್ಯ ಎಂದು ಹೇಳಿದ್ದಾರೆ. ಸಭೆಯಲ್ಲಿ ಉಪಸ್ಥಿತರಿದ್ದ ಹಲವು ತುಳು ಸಂಘಟನೆಗಳ ಪದಾಧಿಕಾರಿಗಳು ಇದಕ್ಕೆ ಸಹಮತ ಸೂಚಿಸಿದ್ದಾರೆ. ಮಾ 24 ರಂದು ಪತ್ರಿಕಾಗೋಷ್ಟಿಯಲ್ಲಿ ಒಕ್ಕೂಟ ತನ್ನ ನಿಲುವು ಸ್ಪಷ್ಟ ಪಡಿಸಲಿದೆ.

LEAVE A REPLY

Please enter your comment!
Please enter your name here