ಇಸ್ರೋ ರಾಕೆಟ್‌ ಲ್ಯಾಂಡಿಂಗ್‌ ವೆಹಿಕಲ್‌ ಹಾರಾಟ-ಲ್ಯಾಂಡಿಂಗ್‌ ಪರೀಕ್ಷೆ ಯಶಸ್ವಿ

ಮಂಗಳೂರು: ಇಸ್ರೋ, ಐಎಎಫ್, ಡಿಆರ್ ಡಿಓ ಸಂಸ್ಥೆಗಳು ಮತ್ತೊಂದು ಯಶಸ್ವಿನ ಗರಿ ಮುಡಿಗೆರಿಸಿಕೊಂಡಿದೆ.

ಚಿತ್ರದುರ್ಗದ ಚಳ್ಳಕೆರೆಯ ಕುದಾಪುರ ಬಳಿಯ ಏರೋನಾಟಿಕಲ್ ಟೆಸ್ಟ್ ರೇಂಜ್ ನಲ್ಲಿ ಮರುಬಳಕೆ ಮಾಡಬಹುದಾದ ಲಾoಚಿಂಗ್ ವೆಹಿಕಲ್ ನ ಆಟಾನಮಸ್ ಲ್ಯಾಂಡಿಂಗ್ ಮಿಷನ್ ನ ಹಾರಾಟ ಪರೀಕ್ಷೆ ನಡೆಸಿ ಯಶಸ್ವಿಯಾಗಿದೆ. ಮಾನವ ರಹಿತ ರಾಕೆಟ್, ಲ್ಯಾಂಡಿಂಗ್ ಹೈ ಸ್ಪೀಡ್ ಮತ್ತು ರಿಟರ್ನಿಂಗ್ ಸೇಮ್ ಪಾತ್ ನ ಸ್ಥಿತಿಗಳಲ್ಲಿ ಈ ಪರೀಕ್ಷೆ ಕೈಗೊಳ್ಳಲಾಗಿದೆ. ಭಾರತೀಯ ವಾಯುಪಡೆಯ ಚೆನೋಕ್‌ ಹೆಲಿಕಾಪ್ಟರ್‌ ಮೂಲಕ ಎ.2ರ ಬೆಳಿಗ್ಗೆ 7.10ಕ್ಕೆ ಟೇಕಾಫ್‌ ಆಗಿದ್ದು, ಬಳಿಕ ಇಂಟಿ ಗ್ರೇಟೆಡ್‌ ನೇವಿಗೇಶನ್‌, ಗೈಡೆನ್ಸ್‌ ಮತ್ತು ಕಂಟ್ರೋಲ್‌ ಸಿಸ್ಟಮ್‌ ಬಳಸಿ 7.40ಕ್ಕೆ ಅಟಾನಮಸ್‌ ಸ್ವಾಯತ್ತ ಲ್ಯಾಂಡಿಂಗ್‌ ಯಶಸ್ವಿಯಾಗಿ ಪೂರ್ಣಗೊಂಡಿದೆ. 

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

 

LEAVE A REPLY

Please enter your comment!
Please enter your name here