ಮಂಗಳೂರು: ದೆಹಲಿ ಮೆಟ್ರೋದಲ್ಲಿ ಬಿಕ್ಕಿನಿ ಧರಿಸಿ ಸಂಚರಿಸುತ್ತಿದ್ದ ಯುವತಿಯೊಬ್ಬಳ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕರಿಂದ ಬಾರಿ ಆಕ್ರೋಶ ವ್ಯಕ್ತವಾಗಿತ್ತು.
ಆದರೆ ಇದಕ್ಕೆ ಕ್ಯಾರೆ ಅನ್ನದ ಯುವತಿ ʼನಾನು ಏನು ಬೇಕಾದರೂ ಧರಿಸುತ್ತೇನೆ, ಅದು ನನ್ನ ಸ್ವಾತಂತ್ರ್ಯ, ನಾನು ಪ್ರಚಾರಕ್ಕಾಗಿ, ಫೇಮಸ್ ಆಗಬೇಕು ಅಂತ ಮಾಡಿಲ್ಲʼ ಎಂದು ಹೇಳಿದ್ದಾಳೆ. ಟೀಕಾಕಾರರಿಗೆ ಖಡಕ್ ಉತ್ತರ ಕೊಟ್ಟಿರುವ ಯುವತಿ ʼನಾನು ಸಂಪ್ರದಾಯದ ಕುಟುಂಬದಿಂದ ಬಂದಿದ್ದೇನೆ, ಆದ್ದರಿಂದ ಬಯಸಿದಂತೆ ಇರಬೇಕೆಂದು ಒಂದು ದಿನ ಹೀಗೆ ಮಾಡಿದ್ದೆ, ಈಗ ಕೆಲವು ತಿಂಗಳಿನಿಂದ ಹೀಗೆ ಓಡಾಡುತ್ತಿದ್ದೇನೆ. ದೆಹಲಿ ಮೆಟ್ರೋ ನೇರಳೆ ಮಾರ್ಗದಲ್ಲಿ ನನಗೆ ಪ್ರಯಾಣಿಸಲು ಅನುಮತಿ ಇಲ್ಲ. ಬೇರೆಲ್ಲೂ ನನಗೆ ಸಮಸ್ಯೆಯಾಗಿಲ್ಲ ಎಂದು 19ರ ಯುವತಿ ಹೇಳಿದ್ದಾಳೆ. ಆದರೆ ಡಿ ಎಂ ಆರ್ ಸಿ ಹೇಳಿಕೆ ಬಿಡುಗಡೆ ಮಾಡಿದ್ದು, ಸಮಾಜದಲ್ಲಿ ಸ್ವೀಕಾರಾರ್ಹವಾಗಿರುವ ಸಾಮಾಜಿಕ ಶಿಷ್ಠಾಚಾರವನ್ನು ಮೆಟ್ರೋದಲ್ಲಿ ಅನುಸರಿಸ ಬೇಕಾಗುತ್ತದೆ. ಡಿಎಂಆರ್‌ಸಿ ನಿರ್ವಹಣೆ ಕಾಯ್ದೆ ಹಾಗೂ ಐಪಿಸಿ ಸೆಕ್ಷನ್ 59ರಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗುತ್ತದೆ ಎಂದು ಎಚ್ಚರಿಸಿದೆ.