ಬೆಂಗಳೂರಿಗೆ ಅಮೂಲ್‌ ಹಾಲಿನ ಎಂಟ್ರಿ – ವಿರೋಧ ವ್ಯಕ್ತ ಪಡಿಸಿದ ನೆಟ್ಟಿಗರು

ಮಂಗಳೂರು: ತನ್ನ ಹಾಲಿನ ಮಾರುಕಟ್ಟೆಯನ್ನು ಕರ್ನಾಟಕದಲ್ಲಿ ವಿಸ್ತರಿಸಲು ಪ್ರಯತ್ನಿಸುತ್ತಿರುವ ಗುಜರಾತಿನ ಅಮೂಲ್ ಗೆ ನೆಟ್ಟಗರಿಂದ ವಿರೋಧ ವ್ಯಕ್ತವಾಗಿದೆ.

ರಾಜ್ಯದಲ್ಲಿ ನಂದಿನಿ‌ ಹಾಲಿರುವಾಗ ಅಮೂಲ್ ಬೇಕಾಗಿಲ್ಲ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಅಮೂಲ್ ಕರ್ನಾಟಕಕ್ಕೆ ಪ್ರವೇಶಿಸಲು ಸುಲಭವಾಗುವಂತೆ ನಂದಿನಿ ಹಾಲಿನ  ಕೃತಕ ಅಭಾವ ಸೃಷ್ಟಿಸುವಂತೆ ಕೆಎಂಎಫ್ ಗೆ ಒತ್ತಡ ತರಲಾಗಿದೆ ಎಂದು ಪಿಎಲ್‌ಇ ಕರ್ನಾಟಕ  ಟ್ವೀಟ್ ಮಾಡಿದೆ. ನಂದಿನಿಯ ಶವಪೆಟ್ಟಿಗೆಗೆ ಇನ್ನೂ ಒಂದು ಮೊಳೆ, ಪರಸ್ಪರ ಅಧಿಪತ್ಯ, ಹೊಂದಿರುವಲ್ಲಿ ಸ್ಪರ್ಧೆಗೆ ಇಳಿಯಬಾರದು ಎಂಬ ಲಿಖಿತ ನಿಯಮವನ್ನು ಅಮೂಲ್ ಮುರಿಯುತ್ತಿದೆ ಎಂದು ಪತ್ರಕರ್ತ ಎಸ್ಎಂ ಪ್ರಸಾದ್ ಟ್ವೀಟ್ ಮಾಡಿದ್ದಾರೆ. ನಂದಿನಿಯ ಮೇಲೆ ಅಮೂಲ್‌ ಪಾರುಪತ್ಯ ಸಾಧಿಸುತ್ತದೆ ಎಂಬ ಆತಂಕ ಇತ್ತೀಚೆಗೆ ಹೆಚ್ಚಾಗಿದ್ದು, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಕೂಡ ನಂದಿನಿ- ಅಮೂಲ್‌ ಒಂದಾಗ ಬೇಕೆಂದು ಹೇಳಿಕೆ ನೀಡಿ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದ್ದರು.

ಟ್ವೀಟ್‌ ಗಾಗಿ ಇಲ್ಲಿ ಕ್ಲಿಕ್‌ ಮಾಡಿ

 

 

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here