



ಮಂಗಳೂರು: ದೆಹಲಿಯಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಇಂಡಿಗೋ ವಿಮಾನದಲ್ಲಿ ಪ್ರಯಾಣಿಕನೋರ್ವ ಕುಡಿದ ಮತ್ತಿನಲ್ಲಿ ವಿಮಾನದ ತುರ್ತು ನಿರ್ಗಮನ ಬಾಗಿಲನ್ನು ತೆರೆಯಲು ಪ್ರಯತ್ನಿಸಿರುವ ಘಟನೆ ಎಪ್ರಿಲ್ ಎ.7ರಂದು ನಡೆದಿದೆ.




ಘಟನೆಗೆ ಸಂಬಂಧಿಸಿದಂತೆ ವಿಮಾನದಲ್ಲಿನ ಪ್ರಯಾಣಿಕರ ಸುರಕ್ಷತೆಗೆ ಅಪಾಯವನ್ನುಂಟು ಮಾಡುವಂತೆ ವರ್ತಿಸಿದ ಪ್ರಯಾಣಿಕ ಕಾನ್ಪುರ ಮೂಲದ ನವಭಾಗ್ ಗಂಜ್ ನಿವಾಸಿ ಪ್ರತೀಕ್ ಎಂಬಾತನನ್ನು ಇಂಡಿಗೋ ಸಿಬ್ಬಂದಿಗಳು ಸಿಐಎಸ್ಎಫ್ ಸಿಬ್ಬಂದಿಗಳಿಗೆ ಒಪ್ಪಿಸಿದ್ದು, ಕೆಂಪೇಗೌಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.














