ಬಿಜೆಪಿ ಪಟ್ಟಿ ಬಿಡುಗಡೆ ಬಳಿಕ ಕಾಂಗ್ರೆಸ್ ನ ಮೂರನೇ ಪಟ್ಟಿ ಬಿಡುಗಡೆ

ಮಂಗಳೂರು : ಕಾಂಗ್ರೆಸ್ ಅಭ್ಯರ್ಥಿಗಳ ಮೂರನೇ ಪಟ್ಟಿ ಇನ್ನೂ ಅಂತಿಮಗೊಂಡಿಲ್ಲ. ರವಿವಾರ ದೆಹಲಿಯಲ್ಲಿ ಹಿರಿಯ ನೇತಾರರ ಸಭೆ ನಡೆದರೂ ಒಮ್ಮತದ ಅಂತಿಮ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ.

ಕೆಲವು ಪ್ರತಿಷ್ಠಿತ ಮತ್ತು ಕುತೂಹಲ ಕೆರಳಿಸಿರುವ ಬಾಕಿ ಇರುವ 58 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆ ಇನ್ನಷ್ಟೇ ಆಗಬೇಕಿದೆ. ಎರಡನೆಯ ಪಟ್ಟಿ ಬಿಡುಗಡೆಯ ಬಳಿಕ ಏರುತ್ತಿರುವ ಬಂಡಾಯದ ಬಿಸಿ ಮೂರನೇ ಪಟ್ಟಿಯ ಆಯ್ಕೆಗೆ ತೊಡಕಾಗಿದೆ. ಬಿಜೆಪಿ ಪಟ್ಟಿ ಬಿಡುಗಡೆಯ ಬಳಿಕವಷ್ಟೇ ಕಾಂಗ್ರೆಸ್ ನ ಮೂರನೇ ಅಂತಿಮಪಟ್ಟಿ ಬಿಡುಗಡೆಯಾಗುವ ಸಾಧ್ಯತೆಯಿದೆ. ದಕ್ಷಿಣ ಕನ್ನಡದ ಮೂರೂ ಕ್ಷೇತ್ರಗಳ ಅಭ್ಯರ್ಥಿಗಳ ಕುರಿತಂತೆ ಉಹಾಪೋಹ ನಿರಾತಂಕವಾಗಿ ಹರಿದಾಡುತ್ತಿದೆ. ಬಿಜೆಪಿ ಪಟ್ಟಿ ಬಿಡುಗಡೆಯ ಬಳಿಕ ಸ್ಪಷ್ಟ ಚಿತ್ರಣ ಲಭ್ಯವಾಗಲಿದೆ.

LEAVE A REPLY

Please enter your comment!
Please enter your name here