ಸಿಕ್ಸರ್ ಭಾರಿಸಿದ ಗುಡಿಸಿ ಒರೆಸಿದ ಕೈಗಳು

ಮಂಗಳೂರು : ಐಪಿಎಲ್ 16ನೇ ಆವೃತ್ತಿಯ 13ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ ವಿರುದ್ಧ ಕೊಲ್ಕತ್ತಾ ನೈಟ್ ರೈಡರ್ಸ್ ವೀರೋಚಿತ ಗೆಲುವು ದಾಖಲಿಸಿದೆ. ಕೊನೆಯ ಓವರ್ ನಲ್ಲಿ ಸತತ ಐದು ಸಿಕ್ಸರ್ ಭಾರಿಸಿದ ಎಡಗೈ ಬ್ಯಾಟ್ಸ್ಮನ್ ರಿಂಕು ಸಿಂಗ್ ಕೆಕೆಆರ್ ತಂಡಕ್ಕೆ ಸ್ಮರಣೀಯ ಗೆಲುವು ತಂದು ಕೊಟ್ಟಿದ್ದಾರೆ.

ಈ ಗೆಲುವಿನ ಬಳಿಕ ವೆಂಕು ಸಿಂಗ್ ಟಾಪ್ ಟ್ರೆಂಡಿಂಗ್ ನಲ್ಲಿದ್ದಾರೆ. ಅಕ್ಟೋಬರ್ 12 1997 ರಂದು ಉತ್ತರ ಪ್ರದೇಶದ ಅಲಿಘಡದಲ್ಲಿ ಅತ್ಯಂತ ಬಡ ಕುಟುಂಬದಲ್ಲಿ ರಿಂಕು ಸಿಂಗ್ ಜನಿಸಿದ್ದ. ತಂದೆ ಎಲ್ಪಿಜಿ ಸಿಲಿಂಡರ್ ವಿತರಿಸುವ ಕೆಲಸ ಮಾಡುತ್ತಿದ್ದರೆ ಸಹೋದರ ಆಟೋರಿಕ್ಷಾ ಓಡಿಸುತ್ತಿದ್ದ. ಚಿಕ್ಕ ವಯಸ್ಸಿನಲ್ಲಿಯೇ ಕ್ರಿಕೆಟ್ ಬಗ್ಗೆ ಒಲವು ಹೊಂದಿದ್ದ ರಿಂಕು ಸಿಂಗ್ ನ ಮನೆಯ ಪರಿಸ್ಥಿತಿ ಕ್ರಿಕೆಟ್ ತರಬೇತಿ ಪಡೆಯಲು ಪೂರಕವಾಗಿರಲಿಲ್ಲ. ಹಾಗಾಗಿ ಸಹೋದರನ ಸಲಹೆಯಂತೆ ಗುಡಿಸಿ ಒರೆಸುವ ಕೆಲಸಕ್ಕೆ ಹೋಗುತ್ತಿದ್ದರು. ಸ್ವತಃ ರಿಂಕು ಸಿಂಗ್ ಇಂಡಿಯನ್ ಎಕ್ಸ್ ಪ್ರೆಸ್ ಗೆ ನೀಡಿದ್ದ ಸಂದರ್ಶನದಲ್ಲಿ ಇದನ್ನು ಹೇಳಿದ್ದರು. ಆದರೆ ಕ್ರಿಕೆಟ್ ಬಗ್ಗೆ ರಿಂಕು ಸಿಂಗ್ ನ ಆಸಕ್ತಿ ಎಂದು ಕಡಿಮೆಯಾಗಿರಲಿಲ್ಲ. ಅದೇ ಆಸಕ್ತಿ ಛಲ ಬದ್ಧತೆ ರಿಂಕುವನ್ನು ಇಂದು ಕ್ರಿಕೆಟ್ ದಿಗ್ಗಜರ ಮೊದಲ ಸಾಲಿನಲ್ಲಿ ನಿಲ್ಲಿಸಿದೆ. ರಿಂಕು ಪರಿಶ್ರಮಕ್ಕೆ ಒಂದು ಸಲಾಂ ಹೇಳಲೇಬೇಕು ಏನಂತೀರಿ?

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here