ಅಕ್ಕಾ……. ಅದಕ್ಕೇ ನೀ ಎರಡನೇ ತಾಯಿ…..

ಮಂಗಳೂರು: 20 ಅಡಿ ಆಲದ ಆಳದ ಬಾವಿಗೆ ಬಿದ್ದ ಎರಡು ವರ್ಷದ ಮಗುವನ್ನು 8 ವರ್ಷದ ಅಕ್ಕ ರಕ್ಷಿಸಿದ ಘಟನೆ ಮಂಕಂಕುಝಿ ಕಳ್ಳಿತುಂಡಂ ಎಂಬಲ್ಲಿ ನಡೆದಿದೆ. ಮಂಕಂಕುಝಿ ಕಳ್ಳಿತುಂಡಂ ಪರಾಗಮಕೂಟದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಿರುವ ಸನಲ್ ಮತ್ತು ಶಜಿಲಾ ದಂಪತಿಯ ಪುತ್ರ ಎರಡು ವರ್ಷದ ಐವಾನ್ ಬಾವಿಗೆ ಬಿದ್ದಿದ್ದು ಎಂಟು ವರ್ಷದ ಅಕ್ಕ ದಿಯಾ ಫಾತಿಮಾ ಆತನನ್ನು ರಕ್ಷಿಸಿದ್ದಾಳೆ.

ದಿಯಾ ತನ್ನ ಇನ್ನೋರ್ವ ತಂಗಿ ದುನಿಯಾ ಜೊತೆ ಅಂಗಳದಲ್ಲಿ ಆಟವಾಡುತ್ತಿದ್ದ ವೇಳೆ ಐವನ್ ಬಾವಿಯ ಮೇಲಿನ ಕಬ್ಬಿಣದ ಮೇಲ್ಚಾವಣಿ ಹತ್ತಿದ್ದಾನೆ. ತುಕ್ಕು ಹಿಡಿದಿದ್ದ ನೆಟ್ ಸಮೇತ ಮಗು ಬಾವಿಗೆ ಬಿದ್ದಿದೆ. ತಮ್ಮನ ಕೂಗಾಟ ಕೇಳಿದ ದಿಯಾ ಪೈಪ್ ಮೂಲಕ ಬಾವಿಗಿಳಿದು ತಮ್ಮನನ್ನು ರಕ್ಷಿಸಿದ್ದಾಳೆ .ಬಳಿಕ ಬಂದ ಅಕ್ಕ ಪಕ್ಕದವರು ಹಗ್ಗ ತಂದು ಬಾವಿಗಿಳಿಸಿ ಮಗುವನ್ನು ಮೊದಲು ಮೇಲೆಕ್ಕೆತ್ತಿದ್ದಾರೆ. ಬಳಿಕ ದಿಯಾ ಹಗ್ಗದ ಮೂಲಕ ಮೇಲೇರಿ ಬಂದಿದ್ದಾಳೆ. ಸಣ್ಣ ಪುಟ್ಟ ಗಾಯಗಳಾಗಿರುವ ಐವನ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಲಕಿ ದಿಯಾಳ ಈ ಸಾಹಸಕ್ಕೆ ವ್ಯಾಪಕ  ಮೆಚ್ಚುಗೆ ವ್ಯಕ್ತವಾಗಿದೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here