ಮಂಗಳೂರು: ವ್ಯಕ್ತಿ ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಲ್ಲ. ಆದರೆ ಮನಸ್ಸು ಗಟ್ಟಿಯಾಗಿರಬೇಕು ಎನ್ನುವುದಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕಾಗಿಲ್ಲ. ಯಾವುದೇ ಕೂಲರ್ ಇಲ್ಲದೆ, ರೆಫ್ರಿಜರೇಟರ್ ಇಲ್ಲದೆ, ಮಹಿಳೆಯೊಬ್ಬರು ಐಸ್ ಕ್ರೀಮ್ ತಯಾರಿಸಿ ಯಶಸ್ವಿಯಾಗಿದ್ದಾರೆ. ಹಾಗೆಂದು ನಾವು ಹೇಳುತ್ತಿಲ್ಲ.
ಸೀಲಿಂಗ್ ಫ್ಯಾನ್ ಸಹಾಯದಿಂದ ಮಹಿಳೆಯೊಬ್ಬರು ಐಸ್ ಕ್ರೀಮ್ ತಯಾರಿಸುವ ವಿಡಿಯೋವನ್ನು ಖ್ಯಾತ ಉದ್ಯಮಿ ಆನಂದ ಮಹಿಂದ್ರ ಹಂಚಿಕೊಂಡಿದ್ದು ಸಖತ್ ವೈರಲಾಗಿದೆ. ಕೈಯಿಂದ ತಯಾರಿಸಿದ ಪ್ಯಾನ್ ಮೇಡ್ ಐಸ್ ಕ್ರೀಮ್ ಭಾರತದಲ್ಲಿ ಮಾತ್ರ ಕಾಣಲು ಸಾಧ್ಯ ಎಂದು ಉಲ್ಲೇಖಿಸಿರುವ ಆನಂದ್ ಮಹಿಂದ್ರ, ಮನಸಿದ್ದರೆ ಮಾರ್ಗವಿದೆ ಎಂದು ಬರೆದುಕೊಂಡಿದ್ದಾರೆ. ವಿಡಿಯೋದಲ್ಲಿ ಮಹಿಳೆ ಐಸ್ ಕ್ರೀಮ್ ಗಾಗಿ ಸಿದ್ಧಪಡಿಸಿದ ಮಿಶ್ರಣವನ್ನು ಕ್ಯಾನ್ ನಲ್ಲಿ ಸುರಿದು ಮುಚ್ಚಳ ಹಾಕಿ ಅದಕ್ಕಿಂತ ದೊಡ್ಡದಾದ ಡಬ್ಬದ ಒಳಗಿಡುತ್ತಾಳೆ ಮತ್ತು ಡಬ್ಬದ ಒಳಭಾಗದಲ್ಲಿ ಐಸ್ ಕ್ಯೂಬ್ ಗಳನ್ನು ಹಾಕುತ್ತಾಳೆ. ಫ್ಯಾನಿಗೆ ಕಟ್ಟಿದ ಹಗ್ಗದ ಇನ್ನೊಂದು ತುದಿಯನ್ನು ಕ್ಯಾನಿಗೆ ಕಟ್ಟಿ ಸ್ವಿಚ್ ಹಾಕಲಾಗುತ್ತದೆ. ಐಸ್ ಕ್ರೀಮ್ ಮಿಶ್ರಣ ತುಂಬಿದ ಕ್ಯಾನ್ ತಿರುಗುತ್ತಾ ಐಸ್ ಐಸ್ ಕ್ಯೂಬ್ ನಿಂದಾಗಿ ನಿಧಾನವಾಗಿ ತಂಪಾಗಿಸಿ ಗಟ್ಟಿಯಾಗುತ್ತದೆ. ಹೀಗೆ ತಯಾರಿಸಿದ ಐಸ್ ಕ್ರೀಮ್ ಅನ್ನು ಮನೆ ಮಂದಿಗೆ ಮಹಿಳೆ ಬಡಿಸುವುದು ವಿಡಿಯೋದಲ್ಲಿ ಸೆರೆಯಾಗಿದೆ.
ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ
Where there’s a will, there’s a way.
Hand-made & Fan-made ice cream. Only in India… pic.twitter.com/NhZd3Fu2NX— anand mahindra (@anandmahindra) March 29, 2023