ಹೆತ್ತವರಿಗೆ ತುತ್ತು ಹಾಕದ ಮಗ – ನೊಂದ ಹಿರಿಜೀವ ಆತ್ಮಹತ್ಯೆ ಶರಣು

ಮಂಗಳೂರು: ನಮ್ಮ ಮಗನ ಬಳಿ 30 ಕೋಟಿ ರೂಪಾಯಿ ಆಸ್ತಿ ಇದೆ. ಆದರೆ ನಮಗೆ ಎರಡು ಹೊತ್ತು ಊಟ ಕೂಡ ಸರಿಯಾಗಿ ಕೊಡುತ್ತಿಲ್ಲ. ಹಾಗಾಗಿ ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ ಎಂದು ಡೆತ್ ನೋಟ್ ಬರೆದಿಟ್ಟು ಹಿರಿಯ ಜೀವಗಳೆರಡು ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ಚಕ್ರಿ ದಾದಿ ಬಳಿಯ ಬಾಂದ್ರಿಯ ಶಿವಕಾಲೋನಿ ನಿವಾಸಿಗಳಾದ ಜಗದೀಶ್ ಚಂದ್ರ ಆರ್ಯ(78) ಮತ್ತು ಭಾಗ್ಲಿದೇವಿ (77) ಮಾತ್ರೆ ನುಂಗಿ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳು. ಆತ್ಮಹತ್ಯೆಗೂ ಮುನ್ನ ಪೊಲೀಸರಿಗೆ ಕರೆ ಮಾಡಿದ್ದ ದಂಪತಿಗಳು ಆತ್ಮಹತ್ಯೆ ಮಾಡುವುದಾಗಿ ಹೇಳಿಕೊಂಡಿದ್ದರು.

ಆದರೆ ಪೊಲೀಸರು ಸ್ಥಳಕ್ಕೆ ತಲುಪುವಷ್ಟರಲ್ಲಿ ಇಬ್ಬರು ಮೃತಪಟ್ಟಿದ್ದರು. ಹಿರಿಯ ಮಗನ ಮನೆಯಲ್ಲಿದ್ದ ದಂಪತಿಗಳನ್ನು ಮಗನ ಮರಣದ ನಂತರ ಸೊಸೆ ಸರಿಯಾಗಿ ನೋಡಿಕೊಳ್ಳದೆ ಮನೆಯಿಂದ ಹೊರ ಹಾಕಿದ್ದಾಳೆ. ಬಳಿಕ ದಂಪತಿಗಳು ವೃದ್ಧಾಶ್ರಮದಲ್ಲಿದ್ದರು. ಕೆಲ ಸಮಯದ ಬಳಿಕ ಪತ್ನಿಗೆ ಸ್ಟ್ರೋಕ್ ಆದ ಕಾರಣ ಮತ್ತೋರ್ವ ಮಗನ ಮನೆಗೆ ಬಂದಿದ್ದಾರೆ. ಮನೆಯಲ್ಲಿ ಉಳಿಯಲು ಮಗ ಅವಕಾಶ ಮಾಡಿ ಕೊಟ್ಟರೂ ಇಬ್ಬರು ಪತ್ನಿಯರ ಮುದ್ದಿನ ಗಂಡ ಹೆತ್ತವರಿಗೆ ಸರಿಯಾಗಿ ಎರಡು ಹೊತ್ತು ಊಟ ಹಾಕುತ್ತಿರಲಿಲ್ಲ. ಹೀಗಾಗಿ ನೊಂದ ಎರಡು ಹಿರಿಜೀವಗಳು ಆತ್ಮಹತ್ಯೆಗೆ ಶರಣಾಗಿದೆ. ಶ್ರವಣ ಕುಮಾರನಂತವರು ಜನ್ಮತಾಳಿದ ಈ ಮಣ್ಣಿನಲ್ಲಿ ಇಂತಹ ಮಕ್ಕಳ ಕೃತ್ಯಗಳು ಬೇಸರ  ತರಿಸುತ್ತದೆ ಅಲ್ಲವೇ?.

LEAVE A REPLY

Please enter your comment!
Please enter your name here