ಮಂಗಳೂರು: ಸುಮಾರು 67 ಲಕ್ಷ ರೂ. ದಾಖಲೆ ರಹಿತ ಹಣ ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ಕಾಸರಗೋಡು ಡಿವೈಎಸ್ಪಿಪಿ ಬಾಲಕೃಷ್ಣನ್ ನಾಯರ್ ನೇತೃತ್ವದ ತಂಡವು ಬಂಧಿಸಿದೆ. ಬಂಧಿತ ವ್ಯಕ್ತಿಯನ್ನು ಪುಂಜಾವಿ ಯ ಹಾರಿಸ್ (39) ಎಂದು ಗುರುತಿಸಲಾಗಿದೆ.
ಎ.14ರ ಬೆಳಿಗ್ಗೆ ಕಲ್ಲೂರಾವಿಯಲ್ಲಿ ವಾಹನ ತಪಾಸಣೆ ವೇಳೆ, ಸ್ಕೂಟರೊಂದನ್ನು ನಿಲ್ಲಿಸಿ ತಪಾಸಣೆ ನಡೆಸಿದಾಗ ಅಕ್ರಮ ಹಣ ಪತ್ತೆಯಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.