ಮಂಗಳೂರು ( ವಾಷಿಂಗ್ಟನ್) :ಗಗನ ಯಾತ್ರಿಗಳನ್ನು ಚಂದ್ರಮಂಗಳ ಗ್ರಹ ಸೇರಿದಂತೆ ಅದರ ಆಚೆಗಿನ ಗ್ರಹಗಳಡೆಗೆ ಕರೆದೊಯ್ಯಲು ನಿರ್ಮಿಸಲಾದ ಸ್ಟಾರ್ ಶಿಪ್ ನ ಮೊದಲ ಪರೀಕ್ಷಾ ಹಾರಾಟವನ್ನು ಸ್ಪೇಸ್ ಎಕ್ಸ್ ಮುಂದೂಡಿದೆ. ಬೂಸ್ಟರ್ ಹಂತದಲ್ಲಿ ಒತ್ತಡದ ಸಮಸ್ಯೆಯಿಂದಾಗಿ ಸ್ಟಾರ್ ಶಿಪ್ ರಾಕೆಟ್ ನ ಲಿಫ್ಟ್ ಅಪ್ ನ್ನು ಉಡಾವಣೆಗೆ ನಿಗದಿಪಡಿಸಲಾಗಿದ್ದ ಸಮಯಕ್ಕಿಂತ ಕೆಲವೇ ನಿಮಿಷಗಳ ಮೊದಲು ಸ್ಥಗಿತಗೊಳಿಸಲಾಯಿತು ಎಂದು ಸ್ಪೇಸ್ ಎಕ್ಸ್ ನ ಅಧಿಕಾರಿಗಳು ತಿಳಿಸಿದ್ದಾರೆ.
ಎಕ್ಸೆಸ್‌ನ ಬೊಕ ಚಿಕ್ಕದಲ್ಲಿರುವ ಸ್ಪೇಸ್ ಎಕ್ಸ್ ಬಾಹ್ಯಾಕಾಶ ನಿಲ್ದಾಣ ವಾದ ಸ್ಟಾರ್ ಬೇಸಿನಿಂದ ಸ್ಥಳೀಯ ಕಾಲಮಾನ ಬೆಳಿಗ್ಗೆ ಎಂಟು ಇಪ್ಪತ್ತರ ವೇಳೆಗೆ ಸ್ಟಾರ್ ಶಿಪ್ ಹಾರಾಟಕ್ಕೆ ಸಮಯ ನಿಗದಿಪಡಿಸಲಾಗಿತ್ತು. ಈಗ ತಾತ್ಕಾಲಿಕವಾಗಿ ಉಡಾವಣೆಯನ್ನು ಸ್ಥಗಿತಗೊಳಿಸಲಾಗಿದ್ದು ಕನಿಷ್ಠ 48 ಗಂಟೆ ವಿಳಂಬವಾಗಲಿದೆ ಎಂದು ಸ್ಪೇಸ್ ಎಕ್ಸ್ ತಿಳಿಸಿದೆ.