ಎಂ.ಪಿ ರೇಣುಕಾಚಾರ್ಯ ರಾಜಕೀಯ ನಿವೃತ್ತಿ ಘೋಷಣೆ

ಮಂಗಳೂರು (ದಾವಣಗೆರೆ): ಯಾವುದೇ ಕಾರಣಕ್ಕೂ ಮುಂದಿನ ದಿನಗಳಲ್ಲಿ  ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ ಎಂದು ಪರಾಜಿತ ಬಿಜೆಪಿ ಅಭ್ಯರ್ಥಿ ಎಂ.ಪಿ ರೇಣುಕಾಚಾರ್ಯ ತಿಳಿಸಿದ್ದಾರೆ.

ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರೇಣುಕಾಚಾರ್ಯ, ಕ್ಷೇತ್ರದಲ್ಲಿ   ಅಭಿವೃದ್ಧಿ ಕೆಲಸ ಮಾಡಿದೆ, ಕೋವಿಡ್‍ನಲ್ಲಿ ಜೀವದ ಹಂಗು ತೊರೆದು ಕಾರ್ಯ ನಿರ್ವಹಿಸಿದೆ, ಆದರೂ ಜನ ಸೋಲಿಸಿದರು. ರಾಜಕೀಯದಿಂದ ನಿವೃತ್ತಿ ಪಡೆದು, ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ಅವರ ಪರವಾಗಿ ಕೆಲಸ ಮಾಡುತ್ತೇನೆ. ಯಾವುದೇ ಕಾರಣಕ್ಕೂ ಚುನಾವಣೆಗೆ ಇನ್ನೂ ಮುಂದೆ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here