ಮಂಗಳೂರು: ವಿಧಾನ ಪರಿಷತ್ತಿನ ಸದಸ್ಯತ್ವ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ನಾಮ ನಿರ್ದೇಶಿತ ಸದಸ್ಯರಾದ ಮೋಹನ್ ಕುಮಾರ್ ಕೊಂಡಜ್ಜಿ ಮತ್ತು ಪಿ ಆರ್ ರಮೇಶ್ ಇಂದು ನಿವೃತ್ತರಾಗಲಿದ್ದಾರೆ.
ಮತ್ತೋರ್ವ ನಾಮ ನಿರ್ದೇಶಿತ ಸದಸ್ಯ ಪಿ ಎಂ ಲಿಂಗಪ್ಪ ಅವರು ಜೂನ್ ತಿಂಗಳಲ್ಲಿ ನಿವೃತ್ತರಾಗಲಿದ್ದಾರೆ. ಸದ್ಯ ನೂತನ ಸರಕಾರ ಎರಡು ವಿಧಾನ ಪಿರಿಷತ್ ಸ್ಥಾನಗಳಿಗೆ ನಾನು ನಿರ್ದೇಶನ ಮಾಡಬಹುದಾಗಿದೆ.
ಪರಿಷತ್ನ ಐದು ಸದಸ್ಯರು ರಾಜೀನಾಮೆ ನೀಡಿ ಚುನಾವಣೆಗೆ ಸ್ಪರ್ಧಿಸಿದ್ದು, ಖಾಲಿ ಇರುವ 5 ಸ್ಥಾನಗಳಿಗೆ ಉಪ ಚುನಾವಣೆಯೂ ನಡೆಯಬೇಕಾಗಿದೆ.