ಮೋದಿ ಮತ್ತೊಮ್ಮೆ ಪ್ರಧಾನಿಯಾದರೆ ದೇಶಕ್ಕೆ ಕಂಟಕ‌ – ಡಾ.ಪರಕಾಲ ಪ್ರಭಾಕರ್

ಮಂಗಳೂರು: ಜನರಲ್ಲಿ ಸುಪ್ತವಾಗಿರುವ ವಿಭಜಕ ಭಾವನೆಗಳನ್ನು ಹೊರತರಲು ಸಮರ್ಥವಾದ ಮೋದಿ ಆಡಳಿತವು ಆರ್ಥಿಕತೆ ಮತ್ತು ಇತರ ಹಲವು ವಿಷಯಗಳ ನಿರ್ವಹಣೆಯಲ್ಲಿ ಅಸಮರ್ಥವಾಗಿದೆ ಎಂದು ಅರ್ಥಶಾಸ್ತ್ರಜ್ಞ ಮತ್ತು ಸಾಮಾಜಿಕ ವಿಮರ್ಷಕ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್‌ ಪತಿ ಡಾ.ಪರಕಾಲ ಪ್ರಭಾಕರ್‌ ಹೇಳಿದ್ದಾರೆ.

ಡಾ.ಪ್ರಭಾಕರ್‌ ಅವರ ಹೊಸ ಪುಸ್ತಕ ʼTHE CROOKED TIMBER OF NEW INDIAʼ ಮೇ 10ರಂದು ಬೆಂಗಳೂರಿನಲ್ಲಿ ಬಿಡುಗಡೆಗೊಂಡಿದ್ದು, ಬಳಿಕ ಕರಣ್‌ ಥಾಪರ್ ನೀಡಿದ ಸಂದರ್ಶನದ ವೇಳೆ ಮಾತನಾಡಿದ ಅವರು 2014 ರ ಚುನಾವಣೆಯಲ್ಲಿ ಗೆಲ್ಲಲು ಬಳಸಿದ ಅಭಿವೃಧ್ದಿಯ ಹಲಗೆಯ ಮೇಲೆ ಗೆದ್ದ ಬಿಜೆಪಿ ಹಿಂದುತ್ವವನ್ನು ಕುತಂತ್ರದಿಂದ ಕಳ್ಳ ಸಾಗಣೆ ಮಾಡಿದೆ ಎಂದು ಹೇಳಿರುವ ಡಾ.ಪ್ರಭಾಕರ್‌ 2024 ರಲ್ಲಿ ಮತ್ತೊಂದು ಬಾರಿ ಮೋದಿ ಸರಕಾರ ಬಂದರೆ ಅದು ಆರ್ಥಿಕತೆಗೆ ಮಾತ್ರವಲ್ಲದೆ ಒಟ್ಟಾರೆ ರಾಷ್ಟ್ರಕ್ಕೆ ವಿಪತ್ತು ತರಲಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

LEAVE A REPLY

Please enter your comment!
Please enter your name here